ಶನಿವಾರ, ಜೂನ್ 25, 2022
25 °C

ಓಮೈಕ್ರಾನ್‌ ಬಿಎ.4 ಸೋಂಕಿತ ಯುವತಿ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಕೊರೊನ ವೈರಾಣುವಿನ ರೂಪಾಂತರ ತಳಿ ಓಮೈಕ್ರಾನ್‌ ಬಿಎ.4 ಸೋಂಕಿಗೆ ಒಳಗಾಗಿದ್ದ ತಮಿಳುನಾಡಿದ 19 ವರ್ಷದ ಯುವತಿ ಈಗ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖಳಾಗಿದ್ದಾಳೆ ಎಂದು ತಮಿಳುನಾಡು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

ಇದು ತಮಿಳುನಾಡಿನ ಪ್ರಥಮ ಓಮೈಕ್ರಾನ್‌ ಬಿಎ.4 ಸೋಂಕು ಪ್ರಕರಣವಾಗಿದ್ದು, ತಮಿಳುನಾಡಿನ ಬೇರೆ ಯಾವುದೇ ಭಾಗಕ್ಕೆ ಸೋಂಕು ಹರಡಿಲ್ಲ ಎಂದು ಎಂದು ಅವರು ದೃಢಪಡಿಸಿದ್ದಾರೆ.

ನಾಲ್ವರು ಸದಸ್ಯರಿರುವ ಯುವತಿಯ ಕುಟುಂಬ ಎಲ್ಲಿಗೂ ಪ್ರಯಾಣ ಮಾಡಿರಲಿಲ್ಲ. ಯುವತಿ ಜೊತೆ ಆಕೆಯ ತಾಯಿ ಕೂಡಾ ಕೋವಿಡ್‌ ಸೋಂಕಿಗೆ ಒಳಗಾಗಿದ್ದರು. ಆದರೆ ಪರೀಕ್ಷೆಯಲ್ಲಿ ಅವರು ಓಮೈಕ್ರಾನ್‌ ಬಿಎ.2 ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿತ್ತು. ತಾಯಿ ಮಗಳು ಇಬ್ಬರೂ ‍ಪ್ರತ್ಯೇಕವಾಗಿ ಇದ್ದು ಚಿಕಿತ್ಸೆ ಪಡೆದಿದ್ದರು. ಇಬ್ಬರೂ ಸೋಂಕು ಮುಕ್ತರಾಗಿದ್ದಾರೆ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು