ಗುರುವಾರ , ಆಗಸ್ಟ್ 18, 2022
23 °C

ಒಂದೇ ಶ್ವಾಸಕೋಶವಿದ್ದರೂ 14 ದಿನಗಳಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾದ ನರ್ಸ್‌

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಭೋಪಾಲ್‌: ಒಂದೇ ಶ್ವಾಸಕೋಶವಿದ್ದರೂ ಮಧ್ಯಪ್ರದೇಶದ ನರ್ಸ್ ಒಬ್ಬರು 14 ದಿನದಲ್ಲಿ ಕೋವಿಡ್ -19ನಿಂದ ಗುಣಮುಖರಾಗಿದ್ದಾರೆ.

ಟಿಕಮ್‍ಘರ್ ಜಿಲ್ಲೆಯ ಸಿವಿಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಪ್ರಫುಲ್ಲಿಟ್ ಪೀಟರ್ (39) ಅವರು ಸೋಂಕು ದೃಢಪಟ್ಟು 14 ದಿನಗಳ ಕಾಲ ಹೋಮ್ ಐಸೋಲೇಷನ್‌ನಲ್ಲಿದ್ದು, ಕೊರೊನಾ ಸೋಂಕನ್ನು ಯಶಸ್ವಿಯಾಗಿ ಎದುರಿಸಿದ್ದಾರೆ.

ಮಧ್ಯಪ್ರದೇಶದ ಟಿಕಮ್‍ಘರ್ ಸಿವಿಲ್‌ ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿಗೆ ಚಿಕಿತ್ಸೆ ಪಡೆದಿರುವ 39 ವರ್ಷದ ಪ್ರಫುಲ್ಲಿಟ್ ಅವರು ಬಾಲ್ಯದಲ್ಲಿಯೇ ಶ್ವಾಸಕೋಶವೊಂದನ್ನು ಕಳೆದುಕೊಂಡಿದ್ದರು.

ಕೊರೊನಾ ಸೋಂಕಿಗೆ ಒಳಗಾಗಿದ್ದಾಗ ಪ್ರಫುಲ್ಲಿಟ್ ಅವರನ್ನು ಟಿಕಮ್‍ಘರ್ ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ಇರಿಸಲಾಗಿತ್ತು. ಕೋವಿಡ್‌ ಪಾಸಿಟಿವ್‌ ಬಂದ ನಂತರ, ಸೋಂಕನ್ನು ಗೆಲ್ಲುವುದು ಪ್ರಫುಲ್ಲಿಟ್ ಅವರಿಗೆ ಕಷ್ಟಕರವಾಗಬಹುದೆಂದು ಕುಟುಂಬ ಸದಸ್ಯರು ಚಿಂತಾಕ್ರಾಂತರಾಗಿದ್ದರು.

ಆದರೆ, ಪ್ರಫುಲ್ಲಿಟ್ ಅವರು 14 ದಿನಗಳ ಕಾಲ ತಮ್ಮ ಮನೆಯಲ್ಲೇ ಪ್ರತ್ಯೇಕವಾಗಿ ವಾಸವಿದ್ದು ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ.

'ಸೋಂಕಿನಿಂದ ಚೇತರಿಸಿಕೊಂಡ ನಂತರ, ಮನೆಯಲ್ಲಿ ಪ್ರತ್ಯೇಕವಾಗಿ ಉಳಿದುಕೊಂಡಾಗ ನಾನು ಧೈರ್ಯ ಕಳೆದುಕೊಳ್ಳಲಿಲ್ಲ. ನಿಯಮಿತವಾಗಿ ಯೋಗ, ಪ್ರಾಣಾಯಾಮ ಮತ್ತು ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮ ಮಾಡುವ ಮೂಲಕ ಗುಣಮುಖಳಾದೆ' ಎಂದು ಪ್ರಫುಲ್ಲಿಟ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು