ಗುರುವಾರ , ಮೇ 13, 2021
40 °C

17,282 ದೃಢ, ದೊರೆಯದ ಹಾಸಿಗೆ: ಆಸ್ಪತ್ರೆಗಳಲ್ಲಿ ನೂಕುನುಗ್ಗಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿಯಲ್ಲಿ ಬುಧವಾರ ಕೊರೊನಾ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಿದ್ದು, ಒಟ್ಟು 17,282 ಜನರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.

ತೀವ್ರ ಜ್ವರ, ಕೆಮ್ಮು, ಗಂಟಲು ಕೆರೆತ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 104 ಜನ ಚಿಕಿತ್ಸೆಗೆ ಸ್ಪಂದಿಸದೆ ಸಾವಿಗಿಡಾಗಿದ್ದಾರೆ.

ಬುಧವಾರ ಸಂಜೆಯವರೆಗೆ ಒಟ್ಟು 1,08,534 ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಶೇ 15.92ರಷ್ಟು ಜನರಲ್ಲಿ ಸೋಂಕು ಕಂಡುಬಂದಿದೆ. ಇತ್ತಿಚಿನ ದಿನಗಳಲ್ಲೇ ಪರೀಕ್ಷೆಗೆ ಒಳಪಟ್ಟವರಲ್ಲಿ ಶೇಕಡಾವಾರು ಪಾಸಿಟಿವ್‌ ಪ್ರಕರಣಗಳಲ್ಲಿ ಇದು ಅತಿ ಹೆಚ್ಚಿನ ಪ್ರಮಾಣದ್ದಾಗಿದೆ.

ಬುಧವಾರ 9,952 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದು, ರಾಷ್ಟ್ರ ರಾಜಧಾನಿ ವಲಯದಲ್ಲಿ ಪ್ರಸ್ತುತ ಒಟ್ಟು 50,736 ಕೊರೊನಾ ಸಕ್ರಿಯ ಪ್ರಕರಣಗಳಿವೆ.

ಆಸ್ಪತ್ರೆಗಳಲ್ಲಿ ನೂಕು ನುಗ್ಗಲು:  ಕೊರೊನಾ ಪೀಡಿತರು ಉಸಿರಾಟದ ತೊಂದರೆಗೆ ಒಳಗಾಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಧಾವಿಸುತ್ತಿರುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಕೆಲವು ಆಸ್ಪತ್ರೆಗಳ ಎದುರು ರೋಗಿಗಳನ್ನು ಹೊತ್ತು ತಂದ 40ರಿಂದ 50 ಅಂಬುಲೆನ್ಸ್‌ಗಳ ಸಾಲು, ಅವರನ್ನು ಚಿಕಿತ್ಸೆಗೆ ದಾಖಲಿಸಲು ಸರದಿ ಸಾಲಿನಲ್ಲಿ ನಿಂತಿದ್ದು ಕಂಡುಬಂದಿದೆ.

ವೆಂಟಿಲೇಟರ್‌, ಆಮ್ಲಜನಕ ಸೌಲಭ್ಯದ ಕೊರತೆ ಇರುವುದರಿಂದ ರೋಗಿಗಳ ಪರದಾಟ ಮುಂದುವರಿದಿದೆ. ಕೊರೊನಾ ಪರೀಕ್ಷೆಗೆ ಒಳಪಡಲು ಬಯಸುವವರು, ಲಸಿಕೆ ಹಾಕಿಸಿಕೊಳ್ಳುವವರು ಹಾಗೂ ಚಿಕಿತ್ಸೆಗಾಗಿ ದಾಖಲಾಗಲು ಬಂದವರಿಂದ ಸರ್ಕಾರಿ ಆಸ್ಪತ್ರೆಗಳ ಎದುರು ನೂಕುನುಗ್ಗಲು ಉಂಟಾಗುತ್ತಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು