ನವದೆಹಲಿ: ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಾದ್ಯಂತ 5,965 ಕೋವಿಡ್–19 ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 18,14,515 ಮುಟ್ಟಿದೆ. ಇದೇ ಅವಧಿಯಲ್ಲಿ 3,937 ಮಂದಿ ಗುಣಮುಖರಾಗಿದ್ದಾರೆ ಹಾಗೂ 75 ಮಂದಿ ಮೃತಪಟ್ಟಿದ್ದಾರೆ. ಒಟ್ಟು 89,905 ಸಕ್ರಿಯ ಪ್ರಕರಣಗಳಿವೆ.

ಪಶ್ಚಿಮ ಬಂಗಾಳದಲ್ಲಿ ಶನಿವಾರ 3,459 ಹೊಸ ಪ್ರಕರಣಗಳು ದಾಖಲಾಗಿದ್ದು, 52 ಮಂದಿ ಮೃತಪಟ್ಟಿದ್ದಾರೆ. ಈ ವರೆಗೂ ಒಟ್ಟು 4,77,446 ಪ್ರಕರಣಗಳು ಬೆಳಕಿಗೆ ಬಂದಿದ್ದು, ಅದರಲ್ಲಿ 4,44,587 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಮಧ್ಯಪ್ರದೇಶದಲ್ಲಿ ಇಂದು 1,634 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು 14,981 ಸಕ್ರಿಯ ಪ್ರಕರಣಗಳಿವೆ.

ಕರ್ನಾಟಕದಾದ್ಯಂತ 1,522 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. 12 ಮಂದಿ ಸಾವಿಗೀಡಾಗಿದ್ದು, 24,757 ಸಕ್ರಿಯ ಪ್ರಕರಣಗಳಿವೆ.

ಪಂಜಾಬ್‌ನಲ್ಲಿ 745 ಹೊಸ ಪ್ರಕರಣಗಲು ಪತ್ತೆಯಾಗಿದ್ದು, 28 ಸೋಂಕಿತರು ಮೃತಪಟ್ಟಿದ್ದಾರೆ. 7,834 ಸಕ್ರಿಯ ಪ್ರಕರಣಗಳಿವೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 4,998 ಹೊಸ ಪ್ರಕರಣಗಳು ದಾಖಲಾಗಿದ್ದು, 89 ಮಂದಿ ಸಾವಿಗೀಡಾಗಿದ್ದಾರೆ. 36,578 ಸಕ್ರಿಯ ಪ್ರಕರಣಗಳಿವೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 41,322 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿರುವುದಾಗಿ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಇದರೊಂದಿಗೆ ದೇಶದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ ಶನಿವಾರ 93,51,110 ಕ್ಕೆ ಏರಿಕೆಯಾಗಿದೆ.

ಇದೇ ಅವಧಿಯಲ್ಲಿ ದೇಶದಾದ್ಯಂತ 485 ಸಾವು ಸಂಭವಿಸಿವೆ. ಹೀಗಾಗಿ, ಭಾರತದಲ್ಲಿ ಕೋವಿಡ್ ಕಾರಣದ ಸಾವುಗಳ ಸಂಖ್ಯೆ 1,36,200 ಆಗಿದೆ.

ಸದ್ಯ ರಾಷ್ಟ್ರದಲ್ಲಿ 4,54,940 ಸಕ್ರಿಯ ಪ್ರಕರಣಗಳಿವೆ. ಈ 24 ಗಂಟೆಗಳಲ್ಲಿ 41,452 ಮಂದಿ ಗುಣುಮಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಈ ವರೆಗೆ ಕೋವಿಡ್ ಕಾಯಿಲೆಯಿಂದ ಚೇತರಿಸಿಕೊಂಡವರ ಸಂಖ್ಯೆ 87,59,969 ಆಗಿದೆ.

ಮಹಾರಾಷ್ಟ್ರದಲ್ಲಿ 18,08,550, ಕರ್ನಾಟಕದಲ್ಲಿ 8,81,086 , ಆಂಧ್ರಪ್ರದೇಶದಲ್ಲಿ8,66,438 ತಮಿಳುನಾಡಿನಲ್ಲಿ 7,77,616, ದೆಹಲಿಯಲ್ಲಿ5,51,262 ಪ್ರಕರಣಗಳಿವೆ.

ಕಳೆದ 24 ಗಂಟೆಗಳಲ್ಲಿ ಜಾರ್ಖಂಡ್‌ನಲ್ಲಿ 189 ಪ್ರಕರಣ, ಸಿಕ್ಕಿಂನಲ್ಲಿ 37, ಪಶ್ಚಿಮ ಬಂಗಾಳದಲ್ಲಿ 3,489 (46 ಸಾವು), ಬಿಹಾರದಲ್ಲಿ 698 (5 ಸಾವು), ಅಸ್ಸಾಂನಲ್ಲಿ 149 (2 ಸಾವು) ವರದಿಯಾಗಿವೆ.

ಶಾಸಕ ಸಾವು

ಮಹಾರಾಷ್ಟ್ರದ ಪಂಡರಾಪುರ-ಮಂಗಳವೇಧ ವಿಧಾನಸಭೆ ಕ್ಷೇತ್ರದ ಎನ್‌ಸಿಪಿ ಶಾಸಕ ಭರತ್ ಭಾಲ್ಕೆ ಶುಕ್ರವಾರ ಪುಣೆಯ ರೂಬಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೋವಿಡ್ ನಂತರದ ಸಮಸ್ಯೆಗಳ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

ಬಿಜೆಪಿ ನಾಯಕನಿಗೆ ಕೋವಿಡ್

ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ, ದೆಹಲಿ ಉಸ್ತುವಾರಿ ವೈಜಯಂತ್ ಪಾಂಡ ಅವರಿಗೆ ಕೋವಿಡ್ ಇರುವುದು ಶುಕ್ರವಾರ ದೃಢವಾಗಿದೆ.

ಪ್ರಧಾನಿ 'ವ್ಯಾಕ್ಸಿನ್ ಟೂರ್'

ಕೊರೊನಾ ವೈರಸ್ ಲಸಿಕೆ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಹಮದಾಬಾದ್, ಹೈದರಾಬಾದ್ ಮತ್ತು ಪುಣೆ ಪ್ರವಾಸ ಕೈಗೊಂಡಿದ್ದಾರೆ.

'ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನಾ ಪ್ರಕ್ರಿಯೆಯನ್ನು ಸ್ವತಃ ಪರಿಶೀಲಿಸಲು ಶನಿವಾರ ಪ್ರಧಾನಿ ನರೇಂದ್ರ ಮೋದಿ 3 ನಗರಗಳಿಗೆ ಭೇಟಿ ನೀಡಲಿದ್ದಾರೆ. ಅಹಮದಾಬಾದ್‌ನ 'ಸೈಡಸ್ ಬಯೋಟೆಕ್ ಪಾರ್ಕ್', ಹೈದರಾಬಾದ್‌ನ 'ಭಾರತ್ ಬಯೋಟೆಕ್' ಮತ್ತು ಪುಣೆಯ 'ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ'ಕ್ಕೆ ಅವರು ಭೇಟಿ ನೀಡುವರು' ಎಂದು ಪ್ರಧಾನಿ ಕಚೇರಿ (ಪಿಎಂಒ) ಟ್ವೀಟ್ ಮಾಡಿದೆ.

ಶನಿವಾರ ಬೆಳಗ್ಗೆ 9.30ಗೆ ಅವರು ಅಹಮದಾಬಾದ್‌ಗೆ ಭೇಟಿ ನೀಡಿದ್ದರು.

ಲೇಹ್‌ನಲ್ಲಿ ರಾತ್ರಿ ಕರ್ಫ್ಯೂ

ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸುವ ಉದ್ದೇಶದಿಂದ ಲೇಹ್‌ನಲ್ಲಿ ಹೊಸ ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ. ಶನಿವಾರದಿಂದ ರಾತ್ರಿ ಕರ್ಫ್ಯೂ ಜಾರಿಗೆ ತರಲು ಆದೇಶಿಸಲಾಗಿದೆ. ರಾತ್ರಿ 8ರಿಂದ ಬೆಳಗ್ಗೆ 5ರ ವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.