ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಶೀಲ್ಡ್, ಕೋವ್ಯಾಕ್ಸಿನ್ ಅತ್ಯಂತ ಸುರಕ್ಷಿತ ಕೋವಿಡ್ ಲಸಿಕೆಗಳು: ವಿ.ಕೆ. ಪೌಲ್

Last Updated 12 ಜನವರಿ 2021, 14:35 IST
ಅಕ್ಷರ ಗಾತ್ರ

ನವದೆಹಲಿ: ತುರ್ತು ಬಳಕೆಗೆ ಅನುಮೋದನೆ ಪಡೆದಿರುವ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಕೋವಿಡ್ ಲಸಿಕೆಗಳನ್ನು ಸಾವಿರಾರು ಜನರ ಮೇಲೆ ಪ್ರಯೋಗಿಸಿ ಪರೀಕ್ಷಿಸಲಾಗಿದೆ,ಈ ಲಸಿಕೆಗಳಿಂದ ಅಡ್ಡಪರಿಣಾಮಗಳು ತೀರಾ ಕಡಿಮೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್ ಮಂಗಳವಾರ ತಿಳಿಸಿದ್ದಾರೆ.

'ಎರಡೂ ಲಸಿಕೆಗಳನ್ನು (ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್) ತುರ್ತು ಬಳಕೆಗೆ ಅಧಿಕೃತಗೊಳಿಸಲಾಗಿದೆ ಮತ್ತು ಅವುಗಳ ಸುರಕ್ಷತೆಯ ಬಗ್ಗೆ ಯಾವುದೇ ಸಂದೇಹವಿಲ್ಲ. ಈ ಲಸಿಕೆಗಳನ್ನು ಸಾವಿರ ಜನರ ಮೇಲೆ ಪ್ರಯೋಗಿಸಿ ಪರೀಕ್ಷಿಸಲಾಗಿದ್ದು, ಅಡ್ಡಪರಿಣಾಮಗಳು ತುಂಬಾ ಕಡಿಮೆ. ಇವುಗಳ ಬಳಕೆಯಿಂದ ಯಾವುದೇ ಗಂಭೀರ ಸಮಸ್ಯೆ ಇಲ್ಲ' ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

'ಇವೆರಡು ಅತ್ಯಂತ ಸುರಕ್ಷಿತ ಲಸಿಕೆಗಳಾಗಿವೆ. ಈ ಲಸಿಕೆಗಳು ಸುರಕ್ಷಿತ ಮತ್ತು ದೃಢವಾಗಿದೆ ಎನ್ನುವ ಸಂದೇಶವನ್ನು ನೀಡೋಣ. ಕೊರೊನಾ ವೈರಸ್‌ ಅನ್ನು ಸೋಲಿಸಲು ಅಗತ್ಯವಿರುವ ಸಂದೇಶವನ್ನು ನಾವು ಹರಡಬೇಕಾಗಿದೆ. ಸುರಕ್ಷಿತವಾಗಿ ಲಸಿಕೆ ನೀಡಲು ಮಾಧ್ಯಮಗಳು ದೇಶದಾದ್ಯಂತ ಜಾಗೃತಿ ಮೂಡಿಸಬೇಕು. ಎಲ್ಲಾ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಮಿಕರು ಮುಂದೆ ಬಂದು ಲಸಿಕೆ ಪಡೆಯಿರಿ' ಎಂದು ಮನವಿ ಮಾಡಿದರು.

'ಜನವರಿ 16 ರಿಂದ ಪ್ರಾರಂಭವಾಗಲಿರುವ ವಿಶ್ವದ ಅತಿದೊಡ್ಡ ಲಸಿಕೆ ಹಾಕುವ ಕಾರ್ಯಕ್ರಮವನ್ನು ಯಶಸ್ವಿಯಾಗಿಸುವುದು ನಮ್ಮ ಕೈಯಲ್ಲಿದೆ. ಲಸಿಕೆ ನೀಡುವಲ್ಲಿ ಸಹಾಯ ಮಾಡಲು ಮುಂದಾಗುವ ಎಲ್ಲ ಸಂಸ್ಥೆಗಳನ್ನು ನಾವು ತೊಡಗಿಸಿಕೊಳ್ಳಬೇಕು. ಸಹಾಯ ಮಾಡಬಯಸುವ ಸಂಘಟನೆಗಳು, ಸಂಸ್ಥೆಗಳು ಜಿಲ್ಲಾಡಳಿತವನ್ನು ಸಂಪರ್ಕಿಸಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿ' ಎಂದು ತಿಳಿಸಿದ್ದಾರೆ.

ದೇಶದಲ್ಲಿಯೇ ತಯಾರಾಗುತ್ತಿರುವ ಎರಡು ಲಸಿಕೆಗಳನ್ನು ಒಪ್ಪಿಕೊಂಡು ಮತ್ತು ಬೆಂಬಲ ನೀಡಿದ ಭಾರತೀಯ ವೈದ್ಯಕೀಯ ಸಂಘಕ್ಕೆ (ಐಎಂಎ) ಧನ್ಯವಾದಗಳನ್ನು ಅರ್ಪಿಸಿದರು. ಕೋವಾಕ್ಸಿನ್ ಅನ್ನು ದೇಶದಲ್ಲಿಯೇ ಅಭಿವೃದ್ಧಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT