ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ 21 ಬೈಕ್ ಆಂಬುಲೆನ್ಸ್‌ಗಳನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ (ಸಿಆರ್‌ಪಿಎಫ್) ಸೋಮವಾರ ಹಸ್ತಾಂತರಿಸಲಾಯಿತು.

ನಕ್ಸಲ್ ಪೀಡಿತ ಮತ್ತು ಹಿಂಸಾಚಾರ ಪ್ರದೇಶಗಳಲ್ಲಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ಒದಗಿಸಲು ಮತ್ತು ಆಸ್ಪತ್ರೆಗೆ ದಾಖಲಿಸಲು ಈ ಬೈಕ್ ಆಂಬುಲೆನ್ಸ್‌ಗಳನ್ನು ಬಳಸಲು ಉದ್ದೇಶಿಸಲಾಗಿದೆ.

‘ರಕ್ಷಿತಾ’ ಹೆಸರಿನಲ್ಲಿ 350 ಸಿಸಿ ರಾಯಲ್ ಎನ್‌ಫಿಲ್ಡ್ ಕ್ಲಾಸಿಕ್ ಬೈಕ್‌ನಲ್ಲಿ ಡಿಆರ್‌ಡಿಒದ ವೈಜ್ಞಾನಿಕ ಸಂಶೋಧನೆಗೆ ಸಂಬಂಧಿಸಿದ ‘ಅಣು ವೈದ್ಯಕೀಯ ಮತ್ತು ಸಂಬಂಧಿತ ವಿಜ್ಞಾನಗಳ ಸಂಸ್ಥೆ’ (ಐಎನ್‍ಎಂಎಎಸ್) ಈ ಆಂಬುಲೆನ್ಸ್‌ಗಳನ್ನು ಅಭಿವೃದ್ಧಿಪಡಿಸಿದೆ.

ಸಿಆರ್‌ಪಿಎಫ್ ನಿಯೋಜಿಸಿರುವ ಸ್ಥಳದಲ್ಲೂ ಸ್ಥಳೀಯರಿಗೆ ನೆರವಾಗಲು ಸಹ ಈ ಬೈಕ್ ಆಂಬುಲೆನ್ಸ್‌ಗಳನ್ನು ಬಳಸಲಾಗುವುದು ಎಂದು ಸಿಆರ್‌ಪಿಎಫ್ ಮುಖ್ಯಸ್ಥ ಎ.ಪಿ. ಮಹೇಶ್ವರಿ ತಿಳಿಸಿದ್ದಾರೆ.

ಈ ಯೋಜನೆಗೆ ₹35.49 ಲಕ್ಷ ವೆಚ್ಚ ಮಾಡಲಾಗಿದೆ. ಬೈಕ್ ಆಂಬುಲೆನ್ಸ್‌ನಲ್ಲಿ ಅಮ್ಲಜನಕದ ಕಿಟ್ ಅಳವಡಿಸಲಾಗಿದೆ ಎಂದು ಸಿಆರ್‌ಪಿಎಫ್ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ:‘ಬಾಲಾಕೋಟ್ ದಾಳಿ ಮಾಹಿತಿಯು ಪಾಕಿಸ್ತಾನಕ್ಕೂ ಸೋರಿಕೆಯಾಗಿತ್ತೇ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.