ಭಾನುವಾರ, ಮಾರ್ಚ್ 26, 2023
24 °C

ಡ್ರಗ್ಸ್ ಪ್ರಕರಣ: ಮುಂಬೈನ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಎನ್‌ಸಿಬಿ ವಿಚಕ್ಷಣಾ ದಳ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ವಿವಾದಾತ್ಮಕ ಕ್ರೂಸ್ ಡ್ರಗ್ಸ್ ಪ್ರಕರಣದ ತನಿಖೆಗಾಗಿ ದೆಹಲಿಯ ಮಾದಕ ವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ವಿಚಕ್ಷಣಾ ತಂಡವು ಸೋಮವಾರ ಮುಂಬೈಗೆ ಬಂದಿಳಿದಿದೆ.

ಎನ್‌ಸಿಬಿ ತಂಡವು ಶಾರುಕ್ ಖಾನ್‌ ಅವರ ಮ್ಯಾನೇಜರ್ ಪೂಜಾ ದಡ್ಲಾನಿ ಮತ್ತು ಎನ್‌ಸಿಬಿಯ ಸಾಕ್ಷಿದಾರ ಕೆ.ಪಿ.ಗೋಸ್ವಾಮಿ ಅವರು ಭೇಟಿ ನೀಡಿದ್ದ ಲೋವೆರ್ ಪಾರೆಲ್‌ ಪ್ರದೇಶದಲ್ಲಿರುವ ಇಂಡಿಯಾನ ಹೋಟೆಲ್‌ ಹೊರ ವಲಯಕ್ಕೆ ಭೇಟಿ ನೀಡಿತು.

ತಂಡದ ಸದಸ್ಯರು ಅ.2ರಂದು ಪಾರ್ಟಿ ಆಯೋಜಿಸಿದ್ದ ಕಾರ್ಡೆಲಿಯಾ ಕ್ರೂಸ್‌ ಹಡಗು ಲಂಗರು ಹಾಕಿದ್ದ ಮುಂಬೈ ಕ್ರೂಸ್‌ ಟರ್ಮಿನಲ್‌ಗೆ ಭೇಟಿ ನೀಡಿ ಪರಿಶೀಲಿಸಿದರು.

ಎನ್‌ಸಿಬಿಯ ಉತ್ತರ ವಲಯದ ಉಪ ಮಹಾ ನಿರ್ದೇಶಕ ಗ್ಯಾನೇಶ್ವರ್ ಸಿಂಗ್‌ ನೇತೃತ್ವದ ನಾಲ್ಕೈದು ಸದಸ್ಯರನ್ನೊಳಗೊಂಡ ವಿಚಕ್ಷಣಾ ದಳ, ಸ್ವತಂತ್ರ ಸಾಕ್ಷಿದಾರ ಪ್ರಭಾಕರ ಸೈಲ್ ಅವರ ಹೇಳಿಕೆ ದಾಖಲಿಸಿಕೊಳ್ಳುವುದು ಸೇರಿದಂತೆ, ಇನ್ನೂ ಕೆಲವು ಪ್ರದೇಶಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು