ಸೋಮವಾರ, ಅಕ್ಟೋಬರ್ 26, 2020
24 °C
ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನಿಯವರ ಪ್ರಯಾಣಕ್ಕಾಗಿ ವಿಶೇಷವಾಗಿ ನಿರ್ಮಿತ ವಿಮಾನ

ಅತಿ ಗಣ್ಯರ ಪ್ರಯಾಣಕ್ಕೆ ಬಿ777 ವಿಮಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನಿಯವರ ಪ್ರಯಾಣಕ್ಕಾಗಿ ವಿಶೇಷವಾಗಿ ನಿರ್ಮಿಸಿರುವ ಬೋಯಿಂಗ್(ಬಿ)‌ 777 ವಿಮಾನವೊಂದು ಗುರುವಾರ ಅಮೆರಿಕದಿಂದ ದೆಹಲಿಗೆ ಬಂದಿಳಿದಿದೆ.

ಮತ್ತೊಂದು ಬಿ777 ವಿಮಾನವನ್ನೂ ಶೀಘ್ರದಲ್ಲೇ ಬೋಯಿಂಗ್‌ ಹಸ್ತಾಂತರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಮಾನಗಳ ಖರೀದಿ ಹಾಗೂ ಅದನ್ನು ಮರುಮಾರ್ಪಾಟುಗೊಳಿಸಲು ₹8,400 ಕೋಟಿ ವೆಚ್ಚವಾಗಿದೆ. ಭಾರತೀಯ ವಾಯುಪಡೆಯ ಪೈಲಟ್‌ಗಳು ‘ಏರ್‌ ಇಂಡಿಯಾ ಒನ್‌’ ಬಿ777 ಹಾರಾಟ ನಡೆಸಲಿದ್ದಾರೆ.

ಅಮೆರಿಕದ ಅಧ್ಯಕ್ಷರ ವಿಮಾನ ‘ಏರ್‌ಫೋರ್ಸ್‌ ಒನ್‌’ನಲ್ಲಿ ಇರುವಂತೆ ಬಿ777 ವಿಮಾನದಲ್ಲಿ ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಇದೆ.

2018ರಲ್ಲಿ ಈ ಎರಡು ವಿಮಾನಗಳನ್ನು ಏರ್ ಇಂಡಿಯಾ ಖರೀದಿಸಿತ್ತು. ಕೆಲ ತಿಂಗಳ ಕಾಲ ಇದನ್ನು ನಾಗರಿಕ ವಿಮಾನವಾಗಿಯೂ ಬಳಸಿಕೊಳ್ಳಲಾಗಿತ್ತು. ನಂತರದಲ್ಲಿ ಗಣ್ಯವಕ್ತಿಗಳ ಪ್ರಯಾಣಕ್ಕಾಗಿ, ವಿಮಾನದ ವಿನ್ಯಾಸ ಹಾಗೂ ರಕ್ಷಣಾ ವ್ಯವಸ್ಥೆಯನ್ನು ಬದಲಾಯಿಸಲು ಬೋಯಿಂಗ್‌ ಕಂಪನಿಗೆ ಕಳುಹಿಸಲಾಗಿತ್ತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು