ಮಂಗಳವಾರ, ಮೇ 18, 2021
22 °C
ವಿದ್ಯುತ್‌ ಪೂರೈಕೆ ವ್ಯವಸ್ಥೆಗೆ ಧಕ್ಕೆ

ಆಸ್ಟ್ರೇಲಿಯಾದಲ್ಲಿ ಚಂಡಮಾರುತ: ಅಪಾರ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪರ್ತ್‌(ಆಸ್ಟ್ರೇಲಿಯಾ): ಭೀಕರ ಚಂಡಮಾರುತದಿಂದ ಆಸ್ಟ್ರೇಲಿಯಾದ ಹಲವು ನಗರಗಳಲ್ಲಿ ಅಪಾರ ಹಾನಿ ಸಂಭವಿಸಿದೆ.

ವಿದ್ಯುತ್‌ ಪೂರೈಕೆ ವ್ಯವಸ್ಥೆಗೆ ಧಕ್ಕೆಯಾಗಿರುವುದರಿಂದ ಕೆಲವು ನಗರಗಳಲ್ಲಿ ಕಗ್ಗತ್ತಲು ಆವರಿಸಿದೆ. ಸುಮಾರು 31 ಸಾವಿರ ಗ್ರಾಹಕರಿಗೆ ತೊಂದರೆಯಾಗಿದೆ.

‘ಸೆರೊಜಾ’ ಚಂಡಮಾರುತ ಪಶ್ಚಿಮ ಆಸ್ಟ್ರೇಲಿಯಾದ ಪ್ರದೇಶಗಳಿಗೆ ಅಪ್ಪಳಿಸಿದೆ.  170 ಕಿಲೋ ಮೀಟರ್‌ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ.

ಕಲ್ಬಾರ್ರಿ ನಗರದಲ್ಲಿ ಶೇಕಡ 70ರಷ್ಟು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಪ್ರೇಲಿಯಾದಲ್ಲಿ ಬಲವಾದ ಚಂಡಮಾರುತ ಅಪ್ಪಳಿಸುವುದು ಅಪರೂಪ. ಕಳೆದ 50 ವರ್ಷಗಳಲ್ಲೇ ಇದು ಬಲಿಷ್ಠ ಚಂಡಮಾರುತವಾಗಿದೆ ಎಂದು ಆಸ್ಟ್ರೇಲಿಯಾದ ಹವಾಮಾನ ಇಲಾಖೆ ತಿಳಿಸಿದೆ.

ಇಂಡೊನೇಷ್ಯಾ ಮತ್ತು ಪೂರ್ವ ತಿಮೊರ್‌ನಲ್ಲಿ ಕಳೆದ ವಾರ ಅಪ್ಪಳಿಸಿದ್ದ ‘ಸೆರೊಜಾ’ ಚಂಡಮಾರುತದಿಂದ ಭೂಕುಸಿತ ಮತ್ತು ಪ್ರವಾಹ ಸಂಭವಿಸಿದ್ದರಿಂದ 174ಮಂದಿ ಮೃತಪಟ್ಟಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು