ಶನಿವಾರ, ಜೂನ್ 19, 2021
29 °C

ಮುಂಬೈ: 24 ಗಂಟೆಗಳಲ್ಲಿ 230 ಮಿ.ಮೀ ಮಳೆ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ‘ತೌತೆ’ ಚಂಡಮಾರುತದಿಂದಾಗಿ ಮುಂಬೈನಲ್ಲಿ 230 ಮಿ.ಮೀ ಮಳೆ ಸುರಿದಿದೆ. ಇದು 24 ಗಂಟೆಗಳಲ್ಲಿ ಮೇ ತಿಂಗಳಲ್ಲಿ ಸುರಿದ ಅತಿ ಹೆಚ್ಚು ಮಳೆ ಎಂದು ಐಎಂಡಿ ಹೇಳಿದೆ.

‘ಮಂಗಳವಾರ ಬೆಳಿಗ್ಗೆ 8 ಗಂಟೆಗಳವರೆಗೆ (24 ಗಂಟೆ) ಸಾಂತಾಕ್ರೂಜ್‌ ವೀಕ್ಷಣಾಲಯದಲ್ಲಿ 230.3 ಮಿ.ಮೀ ಮಳೆ ದಾಖಲಾಗಿದೆ. ಇದೇ ಅವಧಿಯಲ್ಲಿ ಕೊಲಾಬಾ ವೀಕ್ಷಣಾಲಯದಲ್ಲಿ 207.6 ಮಿ.ಮೀ ಮಳೆ ದಾಖಲಾಗಿದೆ’ ಎಂದು ಮುಂಬೈನ ಐಎಂಡಿ ಪ್ರಾದೇಶಿಕ ಕಚೇರಿಯು ತಿಳಿಸಿದೆ.

‘ಕಳೆದ 24 ಗಂಟೆಗಳಲ್ಲಿ ಮುಂಬೈನಲ್ಲಿ(ಸಾಂತಾಕ್ರೂಜ್‌ ) 230 ಮಿ.ಮೀ ಮಳೆ ಸುರಿದಿದೆ. ಇದು 24 ಗಂಟೆಗಳಲ್ಲಿ ಮೇ ತಿಂಗಳಲ್ಲಿ ಸುರಿದ ಅತಿ ಹೆಚ್ಚು ಮಳೆ’ ಎಂದು ಪುಣೆ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟ್ರಾಪಿಕಲ್‌ ಮಿಟಿಯೊರಾಲಜಿಯಲ್ಲಿನ  ಸಂಶೋಧಕ ವಿನೀತ್‌ ಕುಮಾರ್‌ ಅವರು ಟ್ವೀಟ್‌ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು