ಭಾನುವಾರ, ಅಕ್ಟೋಬರ್ 24, 2021
21 °C

ಭಾರತೀಯ ವಿಜ್ಞಾನ ಸಂಸ್ಥೆ ಜೊತೆ ಡಾನ್‌ಫೋಸ್‌ ಇಂಡಿಯಾ ಒಪ್ಪಂದ

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ಹವಾನಿಯಂತ್ರಣ ವ್ಯವಸ್ಥೆ, ವೆಂಟಿಲೇಷನ್‌ ಪರಿಕರಗಳ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಡಾನ್‌ಫೋಸ್‌ ಇಂಡಿಯಾ ಸಂಸ್ಥೆಯು, ಜಾಗತಿಕ ತಾಪಮಾನ ತಡೆಗೆ ಪೂರಕವಾದ ರೆಫ್ರಿಜರೇಟರ್ ಅಭಿವೃದ್ಧಿ ಕುರಿತ ಸಂಶೋಧನೆ ಹಾಗೂ ತರಬೇತಿ ಕೇಂದ್ರವನ್ನು ಸ್ಥಾಪಿಸುವ ಸಂಬಂಧ ಭಾರತೀಯ ವಿಜ್ಞಾನ ಸಂಸ್ಥೆಯ ಜೊತೆಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ.

ಈ ಒಡಂಬಡಿಕೆಯ ಅವಧಿ ನಾಲ್ಕು ವರ್ಷ. ಶಿಕ್ಷಕರು, ವಿದ್ಯಾರ್ಥಿಗಳು, ನಿರ್ವಹಣಾ ಎಂಜಿನಿಯರುಗಳು, ತಂತ್ರಜ್ಞರಿಗೆ ಈ ಅವಧಿಯಲ್ಲಿ ವಿವಿಧ ಹಂತದಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಕಂಪನಿಯ ಹೇಳಿಕೆಯು ತಿಳಿಸಿದೆ.

ಪ್ರಾತ್ಯಕ್ಷಿಕೆಯ ಪರಿಕರಗಳನ್ನು ಆಧರಿಸಿ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಡಾನ್‌ಫೋಸ್‌ ಕ್ಯಾಂಪಸ್ ಎರಡೂ ಕಡೆಯು ತರಬೇತಿ ನೀಡಲಾಗುತ್ತದೆ.

ಡಾನ್‌ಫೋಸ್‌ ಇಂಡಿಯಾ ಅಧ್ಯಕ್ಷ ರವಿಚಂದ್ರನ್‌ ಪುರುಷೋತ್ತಮನ್‌ ಮತ್ತು ಐಐಎಸ್‌ಸಿ ನಿರ್ದೇಶಕ,
ಪ್ರೊ.ಗೋವಿಂದನ್ ರಂಗರಾಜನ್ ಅವರು ಒಡಂಬಡಿಕೆಯ ದಾಖಲೆಗಳನ್ನು ಇತ್ತೀಚೆಗೆ ನವದೆಹಲಿಯಲ್ಲಿ ವಿನಿಮಯ ಮಾಡಿಕೊಂಡರು.

ಈ ಸಂದರ್ಭದಲ್ಲಿ ಡೆನ್ಮಾರ್ಕ್‌ ಪ್ರಧಾನಿ ಮೆಟೆ ಫ್ರೆಡೆರಿಕ್ಸನ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು