ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 43,000 ಕೋಟಿ ವೆಚ್ಚದ ಬೃಹತ್‌ ನೌಕಾ ಯೋಜನೆ; ರಕ್ಷಣಾ ಸಚಿವಾಲಯ ಅನುಮೋದನೆ

₹ 43,000 ಕೋಟಿ ವೆಚ್ಚದಲ್ಲಿ ಆರು ಜಲಾಂತರ್ಗಾಮಿಗಳ ನಿರ್ಮಾಣ
Last Updated 4 ಜೂನ್ 2021, 9:11 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ನೌಕಾಪಡೆಗಾಗಿ ಸುಮಾರು ₹ 43,000 ಕೋಟಿ ವೆಚ್ಚದಲ್ಲಿ ಆರು ಸಾಂಪ್ರದಾಯಿಕ ಜಲಾಂತರ್ಗಾಮಿಗಳನ್ನು ನಿರ್ಮಿಸುವ ಬೃಹತ್‌ ಯೋಜನೆಗೆ ರಕ್ಷಣಾ ಸಚಿವಾಲಯ ಶುಕ್ರವಾರ ಅನುಮೋದನೆ ನೀಡಿದೆ.

ನೌಕಾ ಕ್ಷೇತ್ರದಲ್ಲಿ ಚೀನಾದ ಪರಾಕ್ರಮ ಹೆಚ್ಚಾಗುತ್ತಿದ್ದು, ಅದರ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ಭಾರತ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಉಪಕರಣಗಳ ಖರೀದಿ ಮಂಡಳಿಯ (ಡಿಎಸಿ) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

‘ಮೇಕ್‌ ಇನ್‌ ಇಂಡಿಯಾ’ ಭಾಗವಾಗಿ ‘ಪಿ–75 ಇಂಡಿಯಾ’ ಯೋಜನೆಯ ಪ್ರಸ್ತಾವನೆಗೆ ಕೋರಿಕೆ (ಆರ್‌ಎಫ್‌ಪಿ) ಶೀಘ್ರ ಸಲ್ಲಿಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಜಲಾಂತರ್ಗಾಮಿ ನೌಕೆಗಳ ವಿಶೇಷಣಗಳು ಮತ್ತು ಈ ಬೃಹತ್‌ ಯೋಜನೆಗಾಗಿ ಪ್ರಸ್ತಾವನೆಯ ಕೋರಿಕೆಗಳನ್ನು ರಕ್ಷಣಾ ಸಚಿವಾಲಯ ಮತ್ತು ಭಾರತೀಯ ನೌಕಾಪಡೆಯ ಪ್ರತ್ಯೇಕ ತಂಡಗಳು ಈಗಾಗಲೇ ಪೂರ್ಣಗೊಳಿಸಿವೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT