ಬುಧವಾರ, ಜನವರಿ 27, 2021
24 °C

ದೆಹಲಿ | ಕಾರ್ಯಕ್ರಮ ಆಯೋಜಕಿಗೆ ಕಿರುಕುಳ, ಅತ್ಯಾಚಾರ ಆರೋಪ: ಇಬ್ಬರ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮುಂಬೈ ಮೂಲದ ಕಾರ್ಯಕ್ರಮ ಆಯೋಜಕಿ, 28 ವರ್ಷದ ಮಹಿಳೆ ಮೇಲೆ ಅತ್ಯಾಚಾರ, ಕಿರುಕುಳ ಆರೋಪದಡಿ ದೆಹಲಿಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಕೃತ್ಯ ಇಲ್ಲಿನ ಏರೊಸಿಟಿಯಲ್ಲಿ ಶುಕ್ರವಾರ ನಡೆದಿದ್ದು, ಬಂಧಿತರನ್ನು ಹರಿಯಾಣದ ಸೋನಿಪತ್‌ನ ನಿವಾಸಿಗಳಾದ ಸಂದೀಪ್‌ ಮೆಹ್ತಾ (57) ಮತ್ತು ನವೀನ್‌ ದವಾರ್ (47) ಎಂದು ಗುರುತಿಸಲಾಗಿದೆ. 

ಮೆಹ್ತಾ ವಿರುದ್ಧ ಅತ್ಯಾಚಾರ ಪ್ರಕಣ ದಾಖಲಾಗಿದ್ದು, ಪೊಲೀಸ್ ವಶದಲ್ಲಿದ್ದಾರೆ. ದವಾರ್ ವಿರುದ್ಧ  ಕಿರುಕುಳ, ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ.

‘ದವಾರ್ ಹಲ್ಲೆ ಮಾಡಿದ. ತಾನು ಉಳಿದುಕೊಂಡಿದ್ದ ಹೋಟೆಲ್‌ಗೆ ಬಿಡುವ ನೆಪದಲ್ಲಿ ಬಂದ ಮೆಹ್ತಾ ಕೃತ್ಯ ಎಸಗಿದ. ಮೆಹ್ತಾ ನನಗೆ ಸಾಮಾಜಿಕ ಜಾಲತಾಣ ಮೂಲಕ ಪರಿಚಯವಾಗಿದ್ದ’ ಎಂದು ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು