ಶುಕ್ರವಾರ, ಜುಲೈ 1, 2022
24 °C

ದೆಹಲಿಯ ವಾಯು ಗುಣಮಟ್ಟ ಮತ್ತೆ ‘ತುಂಬಾ ಕಳಪೆ‘: ಹವಾಮಾನ ಇಲಾಖೆ

ಎಎನ್ಐ Updated:

ಅಕ್ಷರ ಗಾತ್ರ : | |

ನವದೆಹಲಿ: ವಾಯು ಗುಣಮಟ್ಟ, ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ ಪ್ರಕಾರ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮಂಗಳವಾರವೂ ವಾಯು ಗುಣಮಟ್ಟ ಕುಸಿದಿದೆ. ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) 340 ದಾಖಲಾಗಿದ್ದು, ಬಹಳ ಕಳಪೆಯಾಗಿರುವುದಾಗಿ ಪರಿಗಣಿಸಲಾಗಿದೆ.

ಸೋನಿಯಾ ವಿಹಾರ್ (ಏಕ್ಯೂಐ 383), ಆನಂದ ವಿಹಾರ್ (392), ಓಕ್ಲಾ (357) ಮತ್ತು ಐಟಿಒ (356) ಸೇರಿದಂತೆ ದೆಹಲಿಯ ಹಲವೆಡೆ ಅಪಾಯಕಾರಿ ಎಕ್ಯೂಐ ಮಟ್ಟ ವರದಿ ಮಾಡಿದೆ. ಇವೆಲ್ಲವೂ 'ತುಂಬಾ ಕಳಪೆ' ಗುಣಮಟ್ಟದ ವಿಭಾಗದಲ್ಲಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ತಿಳಿಸಿದೆ.

ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಕೃಷಿ ತ್ಯಾಜ್ಯಗಳನ್ನು ಸುಡುತ್ತಿರುವುದರಿಂದಾಗಿ ಅವಾಯುಮಾಲಿನ್ಯ ಅಪಾಯಕಾರಿ ಮಟ್ಟಕ್ಕೆ ಏರಿಕೆಯಾಗಲು ಕಾರಣವಾಗಿದೆ ಎಂದು ದೆಹಲಿ ಸರ್ಕಾರ ಹೇಳಿದೆ.

ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹರಿಯಾಣದ ರೈತನೊಬ್ಬ ಕೃಷಿ ತ್ಯಾಜ್ಯಗಳನ್ನು ಕೃಷಿ ಶಕ್ತಿ ಸ್ಥಾವರ ಮತ್ತು ಕಾಗದ ಗಿರಣಿಗೆ ಮಾರಿ ಹಣ ಸಂಪಾದಿಸುತ್ತಿರುವ ಕಥೆಯನ್ನು ಹಂಚಿಕೊಂಡಿದ್ದಾರೆ.

ಕಳೆದ ವಾರ ದೆಹಲಿ ಪರಿಸರ ಸಚಿವ ಗೋಪಾಲ್ ರೈ ಅವರು, ಎಲ್ಲಾ ರಾಜ್ಯಗಳಿಗೆ ಜೈವಿಕ ವಿಭಜಕ ತಂತ್ರಜ್ಞಾನವನ್ನು ಕಡ್ಡಾಯಗೊಳಿಸಬೇಕೆಂದು ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ ಒತ್ತಾಯಿಸಿದ್ದಾರೆ. ನೆರೆಯ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯಗಳ ದಹಿಸುವಿಕೆ ಹೆಚ್ಚಳದೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯದ ಮಟ್ಟ ಏರಿಕೆಯಾಗಿದೆ ಎಂದು ಹೇಳಿದ್ದಾರೆ.

0 ಯಿಂದ 50ರ ನಡುವಿನ ಸೂಚ್ಯಂಕವನ್ನು ‘ಉತ್ತಮ‘ ಎಂದು, 51 ರಿಂದ 100 ನಡುವಿರುವ ಅಂಶವನ್ನು ‘ತೃಪ್ತಿದಾಯಕ‘ ಹಾಗೂ 201 –300 ನಡುವಿನ ‘ಕಳಪೆ‘ ಎಂದು 301 ರಿಂದ 400 ನಡುವಿನ ಸೂಚ್ಯಂಕವನ್ನು ‘ತುಂಬಾ ಕಳಪೆ‘ ಮತ್ತು 401ರಿಂದ 501ರ ನಡುವಿನ ಸೂಚ್ಯಂಕವನ್ನು ‘ತೀವ್ರ ಕಳಪೆ‘ ಎಂದು ಪರಿಗಣಿಸಲಾಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು