ನವದೆಹಲಿ: ಇಲ್ಲಿನ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿನ ಜನದಟ್ಟಣೆ ಮತ್ತು ಸುದೀರ್ಘ ಕಾಯುವಿಕೆ ಕುರಿತು ಗ್ರಾಹಕರ ಆಕ್ರೋಶ ಹೆಚ್ಚುತ್ತಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಪಹಾಸ್ಯದ ಸರಕಾಗಿದೆ.

ವಾರಾಂತ್ಯದಲ್ಲಿ ವಿಮಾನಗಳು ವಿಳಂಬವಾಗುತ್ತಿರುವುದು ಮತ್ತು ಕಾಯುವಿಕೆ ಕುರಿತು ಸಾಕಷ್ಟು ಗ್ರಾಹಕರು ದೂರು ನೀಡಿದ್ದರು. ಅದರ ಬೆನ್ನಲ್ಲೇ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಸೋಮವಾರ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು.

ಆದಾಗ್ಯೂ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಕುಹಕದ ಸರಕಾಗಿದ್ದು, ಸಾಕಷ್ಟು ಮೀಮ್‌ಗಳು ಹರಿದಾಡುತ್ತಿವೆ. ಗ್ರಾಹಕರೊಬ್ಬರು ವಿಮಾನ ನಿಲ್ದಾಣದ ಭದ್ರತಾ ಪರಿಶೀಲನೆ ಸರದಿಯನ್ನು 1970 ರ ದಶಕದ ಪಡಿತರ ಸರದಿಗೆ ಹೋಲಿಸಿದ್ದಾರೆ ಅಥವಾ ಪೂರ್ವ ಬಂಗಾಳದ ಮೋಹನ್ ಬಗನ್ ಪಂದ್ಯದ ಟಿಕೆಟ್ ಕೌಂಟರ್‌ನಂತಿದೆ ಎಂದು ಗೇಲಿ ಮಾಡಿದ್ದಾರೆ.

ದೆಹಲಿ ವಿಮಾನ ನಿಲ್ದಾಣವೀಗ ಹೊಟೆಲ್ ಕ್ಯಾಲಿಫೋರ್ನಿಯಾದಂತೆ. ನೀವು ಯಾವಾಗ ಬೇಕಿದ್ದರೂ ಪ್ರವೇಶಿಸಬಹುದು, ಆದರೆ ಅಲ್ಲಿಂದ ನಿಗದಿತ ಸಮಯಕ್ಕೆ ಹೊರಡಲು ಸಾಧ್ಯವಿಲ್ಲ ಎಂದು ಗ್ರಾಹಕರೊಬ್ಬರು ಆಕ್ರೋಶ ಹೊರಹಾಕಿದ್ದಾರೆ. ಇದರಿಂದಾಗಿ ಈ ಹಿಂದೆ ಸಂಪರ್ಕ ವಿಮಾನಗಳು ತಪ್ಪಿ ಹೋಗಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.