ಭಾನುವಾರ, ಏಪ್ರಿಲ್ 11, 2021
30 °C

ಕಲುಷಿತ ಪ್ರದೇಶಗಳನ್ನು ಒಳಗೊಂಡ ರಾಜ್ಯಗಳ ಪಟ್ಟಿಯಲ್ಲಿ ದೆಹಲಿಗೆ 3ನೇ ಸ್ಥಾನ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಅತಿ ಹೆಚ್ಚು ಕಲುಷಿತ ಸ್ಥಳಗಳನ್ನು ಹೊಂದಿರುವ ರಾಜ್ಯಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯು ಮೂರನೇ ಸ್ಥಾನದಲ್ಲಿದೆ’ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಹೇಳಿದೆ.

‘ಭಾರತದಲ್ಲಿ ವಿಷಕಾರಿ ಮತ್ತು ಅಪಾಯಕಾರಿ ವಸ್ತುಗಳಿಂದ ಕಲುಷಿತಗೊಂಡ 112 ಸ್ಥಳಗಳನ್ನು ಗುರುತಿಸಲಾಗಿದೆ. ಇದಲ್ಲದೆ 168 ಸ್ಥಳಗಳು ಕಲುಷಿತಗೊಂಡಿರಬಹುದು. ಆದರೆ ಈ ಬಗ್ಗೆ ದೃಢೀಕರಣದ ಅಗತ್ಯವಿದೆ’ ಎಂದು ಸಿಪಿಸಿಬಿ ತಿಳಿಸಿದೆ.

ಈ ಪಟ್ಟಿಯಲ್ಲಿ 23 ಕಲುಷಿತ ಸ್ಥಳಗಳೊಂದಿಗೆ ಒಡಿಶಾ ಮೊದಲ ಸ್ಥಾನದಲ್ಲಿದ್ದು, 21 ಕಲುಷಿತ ಪ್ರದೇಶಗಳೊಂದಿಗೆ ಉತ್ತರ ಪ್ರದೇಶ ದ್ವಿತೀಯ ಮತ್ತು ದೆಹಲಿ ತೃತೀಯ ಸ್ಥಾನದಲ್ಲಿದೆ.

‘ದೆಹಲಿಯಲ್ಲಿ ಭಲ್ಸ್ವಾ, ಗಾಜಿಪುರ, ಜಿಲ್ಮಿಲ್‌, ವಾಜಿರ್ಪುರದ ಕೈಗಾರಿಕಾ ಪ್ರದೇಶಗಳು, ನ್ಯೂ ಫ್ರೆಂಡ್ಸ್ ಕಾಲೊನಿ, ದಿಲ್ಶಾದ್ ಗಾರ್ಡನ್ ಮತ್ತು ಲಾರೆನ್ಸ್ ರಸ್ತೆ ಸೇರಿದಂತೆ ಒಟ್ಟು  11 ಕಲುಷಿತ ತಾಣಗಳು ಇವೆ. ಇದನ್ನು ಹೊರತುಪಡಿಸಿ ದೆಹಲಿಯಲ್ಲಿ ಇನ್ನೂ 12 ಪ್ರದೇಶಗಳು ಕಲುಷಿತಗೊಂಡಿರುವ ಸಾಧ್ಯತೆಗಳಿವೆ’ ಎಂದು ಸಿಪಿಸಿಬಿ ಹೇಳಿದೆ.

‘ಕಲುಷಿತ ಸ್ಥಳಗಳು ಮಾನವ ನಿರ್ಮಿತವಾಗಿದ್ದು, ಮಾನವ ಬಳಿಸಿದ ವಸ್ತುಗಳು ವಿಷಕಾರಿ ಮತ್ತು ಅಪಾಯಕಾರಿಯಾಗಿ ಮಾರ್ಪಡಾಗುತ್ತಿವೆ. ಇದು ಪರಿಸರ ಮತ್ತು ಮಾನವನ ಆರೋಗ್ಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ’ ಎಂದು ಕೇಂದ್ರ ಪರಿಸರ ಸಚಿವಾಲಯ ತಿಳಿಸಿದೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ನಿರ್ದೇಶನದ ಮೇರೆಗೆ ಈಗಾಗಲೇ ಗುಜರಾತ್‌, ಕೇರಳ, ಜಾರ್ಖಾಂಡ್‌, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು, ಉತ್ತರ ಪ್ರದೇಶ ಸೇರಿ ಒಟ್ಟು 7 ರಾಜ್ಯದ 14 ಕಲುಷಿತ ಸ್ಥಳಗಳಲ್ಲಿ ಪರಿಹಾರ ಕಾರ್ಯವನ್ನು ನಡೆಸಲಾಗುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು