ನವದೆಹಲಿ: ಅಗ್ನಿಶಾಮಕ ದಳದವರು ಆರು ತಿಂಗಳಲ್ಲಿ 2,400ಕ್ಕೂ ಹೆಚ್ಚು ಪಕ್ಷಿಗಳನ್ನು ದೆಹಲಿಯಲ್ಲಿ ರಕ್ಷಿಸಿದ್ದಾರೆ.

ಮಾರ್ಚ್ 15ರಿಂದ ಸೆಪ್ಟೆಂಬರ್ 30ರವರೆಗೆ ಪ್ರಾಣಿ, ಪಕ್ಷಿಗಳನ್ನು ರಕ್ಷಿಸುವಂತೆ 13,271 ಕರೆಗಳು ಬಂದಿದ್ದವು. ಈ ಅವಧಿಯಲ್ಲಿ 2,433 ಪಕ್ಷಿ ಮತ್ತು 1,681 ಪ್ರಾಣಿಗಳನ್ನು ರಕ್ಷಿಸಲಾಗಿದೆ ಎಂದುದೆಹಲಿ ಅಗ್ನಿಶಾಮಕ ಸೇವೆ ಇಲಾಖೆ (ಡಿಎಫ್‌ಎಸ್) ಮಾಹಿತಿ ನೀಡಿದೆ.

‘ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಗಾಳಿಪಟಗಳನ್ನು ಹಾರಿಸುವುದರಿಂದ ಈ ಸಂದರ್ಭದಲ್ಲಿ ಪಕ್ಷಿಗಳಿಗೆ ಅಪಾಯ ಹೆಚ್ಚಿರುತ್ತದೆ. ಆಗಸ್ಟ್ ತಿಂಗಳೊಂದರಲ್ಲೇ ಪಕ್ಷಿ ರಕ್ಷಣೆಗೆ 882, ಪ್ರಾಣಿ ರಕ್ಷಣೆಗೆ 345 ಕರೆಗಳು ಬಂದಿದ್ದವು. ವಿದ್ಯುತ್ ತಂತಿಯ ಮೇಲೆ ಅಥವಾ ಗಾಳಿಪಟ ದಾರದಿಂದಾಗಿ ಮರದ ಮೇಲೆ ಸಿಲುಕಿಕೊಳ್ಳುವಕಾಗೆ, ಪಾರಿವಾಳ, ಗಿಳಿಗಳಂತಹ ಪಕ್ಷಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ರಕ್ಷಿಸಲಾಗಿದೆ’ ಡಿಎಫ್‌ಎಸ್ ನಿರ್ದೇಶಕ ಅತುಲ್ ಗಾರ್ಗ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.