ಭಾನುವಾರ, ಜೂನ್ 26, 2022
21 °C
ಕೆವಿಐಸಿ ವಾದ ಸ್ವೀಕರಿಸಿದ ನ್ಯಾಯಾಲಯ, ಬ್ರಾಂಡ್‌ ಹೆಸರು ತೆಗೆಯುವಂತೆ ನಿರ್ದೇಶನ

ಕಾನೂನು ಬಾಹಿರ ‘ಖಾದಿ‘ ಬ್ರಾಂಡ್‌ ಬಳಕೆಗೆ ದೆಹಲಿ ಹೈಕೋರ್ಟ್‌ ನಿಷೇಧ

‍ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ‍‘ಖಾದಿ’ ಬ್ರಾಂಡ್ ಹೆಸರನ್ನು ಖಾಸಗಿ ಸಂಸ್ಥೆಗಳು ಕಾನೂನು ಬಾಹಿರವಾಗಿ ಬಳಸಿಕೊಂಡು ಸೌಂದರ್ಯ ಸ್ಪರ್ಧೆಗಳು ಮತ್ತು ಇತರ ವ್ಯಾಪಾರ ಚಟುವಟಿಕೆ ನಡೆಸುತ್ತಾ, ಜನರನ್ನು ದಾರಿ ತಪ್ಪಿಸುವುದನ್ನು ನಿಲ್ಲಿಸಬೇಕು ಎಂದು ದೆಹಲಿ ಹೈಕೋರ್ಟ್ ಆದೇಶಿಸಿದೆ.

ನೋಯ್ಡಾ ಮೂಲದ 'ಖಾದಿ ಡಿಸೈನ್ ಕೌನ್ಸಿಲ್ ಆಫ್ ಇಂಡಿಯಾ' (ಕೆಡಿಸಿಐ) ಮತ್ತು 'ಮಿಸ್ ಇಂಡಿಯಾ ಖಾದಿ ಫೌಂಡೇಷನ್' (ಎಂಐಕೆಎಫ್) ಸಂಸ್ಥೆಗಳು, ಖಾದಿ ಬ್ರಾಂಡ್ ಹೆಸರನ್ನು ಮೋಸದಿಂದ ಬಳಸುತ್ತಾ, ಜನರಿಗೆ ಮೋಸ ಮಾಡಿವೆ ಎಂದು ಕೆವಿಐಸಿ ಆರೋಪಿಸಿದೆ.

ಈ ಕುರಿತು ಹೈಕೋರ್ಟ್‌ ವಿಚಾರಣೆ ನಡೆಸಿ ನೀಡಿರುವ ಏಕಪಕ್ಷೀಯ ಆದೇಶದಲ್ಲಿ, ಈ ಎರಡು ಘಟಕಗಳು ಕೆವಿಐಸಿ ಟ್ರೇಡ್‌ ಮಾರ್ಕ್‌ ಆದ ‘ಖಾದಿ‘ ಬ್ರಾಂಡ್‌ ಅನ್ನು ದುರುಪಯೋಗ ಮಾಡಿಕೊಂಡಿವೆ ಮತ್ತು ಟ್ರೇಡ್‌ ಮಾರ್ಕ್‌ ನಿಯಮವನ್ನು ಉಲ್ಲಂಘಿಸಿವೆ ಎಂದು ಹೇಳಿದೆ.

ಇದೇ ವೇಳೆ 'ಖಾದಿ ಡಿಸೈನ್ ಕೌನ್ಸಿಲ್ ಆಫ್ ಇಂಡಿಯಾ', 'ಮಿಸ್ ಇಂಡಿಯಾ ಖಾದಿ ಫೌಂಡೇಷನ್' ಮತ್ತು ಅದರ ಸ್ವಯಂ ಘೋಷಿತ ಸಿಇಒ ಅಂಕುಶ್ ಅನಾಮಿಗೆ ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಮತ್ತು ಫೇಸ್‌ಬುಕ್‌ ಸೇರಿದಂತೆ ತಮ್ಮ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ 'ಖಾದಿ ಡಿಸೈನ್ ಕೌನ್ಸಿಲ್ ಆಫ್ ಇಂಡಿಯಾ' ಮತ್ತು 'ಮಿಸ್ ಇಂಡಿಯಾ ಖಾದಿ' ಕಂಪನಿಗಳ ಹೆಸರಿನಲ್ಲಿ ಬಳಸಿರುವ ಖಾದಿ ಟ್ರೇಡ್ ಹೆಸರನ್ನು ತೆಗೆಯುವಂತೆ ಹೈಕೋರ್ಟ್ ನಿರ್ದೇಶಿಸಿದೆ.

ಜತೆಗೆ, www.missindiskhadi.in, www.kdci.org ಮತ್ತು ಅನಾಮಿ ನಡೆಸುವ ಇ–ಕಾಮರ್ಸ್‌ ಪೋರ್ಟೆಲ್‌ www.paridhaanam.com ನಿಂದಲೂ ಖಾದಿ ಹೆಸರನ್ನು ತೆಗೆಯುವಂತೆ ಆದೇಶದಲ್ಲಿ ಸೂಚಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು