ಮಂಗಳವಾರ, ನವೆಂಬರ್ 29, 2022
29 °C

ಎನ್‌ಎಸ್‌ಇ ಮಾಜಿ ಸಿಇಒ ಚಿತ್ರಾ, ಮಾಜಿ ಸಿಒಒ ಸುಬ್ರಮಣಿಯನ್‌ಗೆ ಜಾಮೀನು ಮಂಜೂರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬ್ರೋಕರ್‌ಗಳಿಗೆ ತಮ್ಮ ಸರ್ವರ್‌ಗಳನ್ನು ಷೇರು ಮಾರುಕಟ್ಟೆಯಲ್ಲಿ ಇರಿಸುವ ಸೌಲಭ್ಯ ಕಲ್ಪಿಸುವಲ್ಲಿ (ಕೊ ಲೊಕೇಷನ್) ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಷೇರು ಪೇಟೆಯ (ಎನ್‌ಎಸ್‌ಇ) ಮಾಜಿ ಸಿಇಒ ಚಿತ್ರಾ ರಾಮಕೃಷ್ಣ, ಮಾಜಿ ಸಿಒಒ ಆನಂದ ಸುಬ್ರಮಣಿಯನ್ ಅವರಿಗೆ ದೆಹಲಿ ಹೈಕೋರ್ಟ್‌ ಬುಧವಾರ ಜಾಮೀನು ಮಂಜೂರು ಮಾಡಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಧೀರಕುಮಾರ್‌ ಜೈನ್‌, ‘ಎನ್‌ಎಸ್‌ಇಯ ಈ ಇಬ್ಬರು ಮಾಜಿ ಅಧಿಕಾರಿಗಳಿಗೆ ಡಿಫಾಲ್ಟ್‌ ಜಾಮೀನು ನೀಡಲಾಗುತ್ತಿದೆ’ ಎಂದರು. (ಪ್ರಾಸಿಕ್ಯೂಷನ್, ನಿಗದಿತ ಅವಧಿಯ ಒಳಗಾಗಿ ದೋಷಾರೋಪ ಪಟ್ಟಿ ಸಲ್ಲಿಸದ ಕಾರಣ ಆರೋಪಿಯು, ಕಾನೂನುಬದ್ಧವಾಗಿ ತಂತಾನೆ ಪಡೆಯಬಹುದಾದ ಜಾಮೀನಿಗೆ ‘ಡಿಫಾಲ್ಟ್‌’ ಜಾಮೀನು ಎನ್ನಲಾಗುತ್ತದೆ).

ಈ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ, ಕಳೆದ ಫೆಬ್ರುವರಿ 24ರಂದು ಸುಬ್ರಮಣಿಯನ್ ಹಾಗೂ ಮಾರ್ಚ್‌ 6ರಂದು ಚಿತ್ರಾ ರಾಮಕೃಷ್ಣ ಅವರನ್ನು ಬಂಧಿಸಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು