ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೂಲ್ ಕಿಟ್ ದಾಖಲೆಯ ಹಿಂದೆ "ಪೊಯೆಟಿಕ್ ಜಸ್ಟೀಸ್ ಫೌಂಡೇಶನ್" ಕೈವಾಡ?

Last Updated 6 ಫೆಬ್ರುವರಿ 2021, 2:39 IST
ಅಕ್ಷರ ಗಾತ್ರ

ನವದೆಹಲಿ: ಗ್ರೇಟಾ ಥನ್‌ಬರ್ಗ್ ಹಂಚಿಕೊಂಡಿದ್ದ ಟೂಲ್ ಕಿಟ್ ಬಗ್ಗೆ ದೆಹಲಿ ಪೊಲೀಸರು ಮತ್ತಷ್ಟು ಮಾಹಿತಿ ಕಲೆ ಹಾಕಿದ್ದಾರೆ. ಟೂಲ್ ಕಿಟ್ ಖಲಿಸ್ತಾನ್ ಪರವಾದ "ಪೊಯೆಟಿಕ್ ಜಸ್ಟೀಸ್ ಫೌಂಡೇಶನ್" ಗುಂಪಿಗೆ ಸಂಬಂಧಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಅವರು ಹೇಳಿದ್ದಾರೆ.

ಕ್ರಿಮಿನಲ್ ಪಿತೂರಿ, ದೇಶದ್ರೋಹ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಅಡಿ ಅನಾಮಧೇಯ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಟೂಲ್ ಕಿಟ್ ದಾಖಲೆಯು "ಪೊಯೆಟಿಕ್ ಜಸ್ಟೀಸ್ ಫೌಂಡೇಶನ್" ಎಂಬ ಖಲಿಸ್ತಾನ್ ಪರವಾದ ಗುಂಪಿಗೆ ಸಂಬಂಧಿಸಿರುವುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 26 ರಂದು ನಡೆದ ಹಿಂಸಾಚಾರ ಸೇರಿದಂತೆ ಕಳೆದ ಕೆಲವು ದಿನಗಳಲ್ಲಿ ನಡೆದ ಘಟನೆಗಳ ಬಗ್ಗೆ "ಟೂಲ್ಕಿಟ್" ನ ಕ್ರಿಯಾ ಯೋಜನೆಯಲ್ಲಿ ಉಲ್ಲೇಖವಿರು ಬಗ್ಗೆ "ಕಾಪಿಕ್ಯಾಟ್ " ಪರಿಶೀಲನೆ ವೇಳೆ ಬಹಿರಂಗವಾಗಿದೆ. ಇದು ಭಾರತ ಸರ್ಕಾರದ ವಿರುದ್ಧದ "ಸಾಮಾಜಿಕ, ಸಾಂಸ್ಕೃತಿಕ" ಮತ್ತು ಆರ್ಥಿಕ ಯುದ್ಧ. " ಎಂದು ಪೊಲೀಸರು ಹೇಳುತ್ತಾರೆ.

ಪೊಲೀಸರ ಪ್ರಕಾರ,ಜನವರಿ 26 ರಂದು ಅಥವಾ ಅದಕ್ಕೂ ಮೊದಲು ಹ್ಯಾಶ್‌ಟ್ಯಾಗ್‌ಗಳ ಮೂಲಕ ಡಿಜಿಟಲ್ ಸ್ಟ್ರೈಕ್, ಜನವರಿ 23 ರಂದು ಟ್ವೀಟ್ ಬಿರುಗಾಳಿಗಳು, ಜನವರಿ 26 ರಂದು ದೈಹಿಕ ಕ್ರಮ ಮತ್ತು ರೈತರೊಂದಿಗೆ ಸೇರಿಕೊಂಡು ದೆಹಲಿಗೆ ಮೆರವಣಿಗೆ ಸೇರಿದಂತೆ ಟೂಲ್ ಕಿಟ್ ಒಂದು ನಿರ್ದಿಷ್ಟ ವಿಭಾಗವನ್ನು ಹೊಂದಿದೆ ಎಂದು ಪೊಲಿಸರು ಹೇಳುತ್ತಾರೆ.

ಟೂಲ್ ಕಿಟ್ ಡಾಕ್ಯುಮೆಂಟ್ ಭಾರತ ಸರ್ಕಾರದ ವಿರುದ್ಧ ಅಸಮಾಧಾನ ಮತ್ತು ಕೆಟ್ಟ ಭಾವನೆ ಹರಡುವ, ವಿವಿಧ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಗುಂಪುಗಳಲ್ಲಿ ಅಸಮಾಧಾನವನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿತ್ತು ಎಂದು ಪೊಲೀಸರು ಹೇಳು‌ತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT