ಸೋಮವಾರ, ಜೂನ್ 21, 2021
30 °C
ಈಶಾನ್ಯ ದೆಹಲಿ ಗಲಭೆ ಪ್ರಕರಣದ ಆರೋಪಿ

ತಂದೆಯ ಅಂತ್ಯಸಂಸ್ಕಾರ: ಜೆಎನ್‌ಯು ವಿದ್ಯಾರ್ಥಿನಿ ನತಾಶಾ ನರ್ವಾಲ್‌ಗೆ ಜಾಮೀನು

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಈಶಾನ್ಯ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಜೆಎನ್‌ಯು ವಿದ್ಯಾರ್ಥಿನಿ ನತಾಶಾ ನರ್ವಾಲ್‌ ತಂದೆ ಕೋವಿಡ್‌ನಿಂದ ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ನತಾಶಾಗೆ ದೆಹಲಿ ಹೈಕೋರ್ಟ್‌ ಸೋಮವಾರ ಜಾಮೀನು ನೀಡಿದೆ.

ನ್ಯಾಯಮೂರ್ತಿಗಳಾದ ಸಿದ್ದಾರ್ಥ್‌ ಮೃದುಲ್‌ ಮತ್ತು ಎ.ಜೆ. ಭಂಭಾನಿ ಅವರ ಪೀಠವು ನತಾಶಾ ನರ್ವಾಲ್‌ರಿಂದ ₹50,000 ವೈಯಕ್ತಿಕ ಬಾಂಡ್‌ ಬರೆಸಿಕೊಂಡು ಮೂರು ವಾರಗಳ ಮಧ್ಯಂತರ ಜಾಮೀನು ನೀಡಿದೆ.

ನತಾಶಾ ಅಣ್ಣನಿಗೂ ಸೋಂಕು ತಗುಲಿದೆ. ಅಲ್ಲದೆ ಸರ್ಕಾರವು ಈ ಜಾರ್ಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸದ ಕಾರಣ ನತಾಶಾಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು