ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಟಲಿಯಲ್ಲಿ 'ಡೆಲ್ಟಾ' ಜೊತೆಗೆ ಕಪ್ಪಾ 'ತಳಿ' ಕೊರೊನಾ ವೈರಸ್‌ನ ಹಾವಳಿ

Last Updated 26 ಜೂನ್ 2021, 4:07 IST
ಅಕ್ಷರ ಗಾತ್ರ

ಮಿಲಾನ್‌: ಕೊರೊನಾ ವೈರಸ್‌ನ ರೂಪಾಂತರ ತಳಿ ಡೆಲ್ಟಾ ಮತ್ತು ಅದರ ಜೊತೆಗೇ ರೂಪಾಂತರಗೊಂಡಿರುವ ಕಪ್ಪಾ ತಳಿಯಿಂದಾಗಿ ಕಳೆದ ತಿಂಗಳು ಇಟಲಿಯಲ್ಲಿ ಕೋವಿಡ್‌ ಪ್ರಕರಣಗಳು ಏರಿಕೆಯಾಗಿವೆ. ದೇಶದ ಒಟ್ಟು ಕೋವಿಡ್‌ ಪ್ರಕರಣಗಳಲ್ಲಿ ಈ ಎರಡೂ ಮಾದರಿಯ ಸೋಂಕು ಪ್ರಕರಣಗಳ ಪ್ರಮಾಣ ಶೇ 17ರಷ್ಟಿದೆ ಎಂದು ‘ಇಟಲಿ ರಾಷ್ಟ್ರೀಯ ಆರೋಗ್ಯ ಸಂಸ್ಥೆ–ಐಎಸ್ಎಸ್‘ ಶುಕ್ರವಾರ ತಿಳಿಸಿದೆ.

ಈ ಎರಡರ ಪೈಕಿ ಡೆಲ್ಟಾ ತಳಿ ಪ್ರಾಬಲ್ಯ ಸಾಧಿಸುತ್ತಿದೆ ಎಂದೂ ಐಎಸ್‌ಎಸ್‌ ಹೇಳಿದೆ.

ಸಾರ್ಸ್‌ ಕೋವ್‌–2 (ಕೊರೊನಾ ವೈರಸ್‌)ನಿಂದ ರೂಪಾಂತರಗೊಂಡು ಸೃಷ್ಟಿಯಾಗಿರುವ ಡೆಲ್ಟಾ(ಬಿ16172) ಮತ್ತು ಕಪ್ಪಾ (ಬಿ16171) ಮೊದಲಿಗೆ ಪತ್ತೆಯಾಗಿದ್ದು ಭಾರತದಲ್ಲಿ. ಇದರಲ್ಲಿ ಡೆಲ್ಟಾವನ್ನು ‘ಆತಂಕಕಾರಿ ತಳಿ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಘೋಷಿಸಿದೆ.

ಇಟಲಿಯಲ್ಲಿ ಮೇ ತಿಂಗಳಲ್ಲಿ ಶೇ 4.2ರಷ್ಟಿದ್ದ ಡೆಲ್ಟಾ ಮತ್ತು ಕಪ್ಪಾ ಪ್ರಕರಣಗಳು ಜೂನ್‌ನಲ್ಲಿ ಶೇ 16.8ಕ್ಕೆ ಏರಿವೆ. ಜೂನ್ 21 ರಂದು ಲಭ್ಯವಾದ ದತ್ತಾಂಶ ಉಲ್ಲೇಖಿಸಿ ಐಎಸ್‌ಎಸ್‌ ಮಾಹಿತಿ ನೀಡಿದೆ.

‘ಈ ಎರಡೂ ತಳಿಗಳ ಪ್ರಸರಣ ವೇಗ ಪಡೆದುಕೊಳ್ಳುತ್ತಿರುವುದು ನಮ್ಮ ಸಾಂಕ್ರಾಮಿಕ ರೋಗ ಅಧ್ಯಯನದಲ್ಲಿ ಗೊತ್ತಾಗಿದೆ. ಯೂರೋಪಿನ ಇತರ ದೇಶಗಳಂತೆಯೇ ಇಟಲಿಯಲ್ಲಿಯೂ ಡೆಲ್ಟಾ ತಳಿ ಪ್ರಾಬಲ್ಯ ಸಾಧಿಸುತ್ತಿದೆ,‘ ಎಂದು ಐಎಸ್‌ಎಸ್‌ನ ಸಾಂಕ್ರಾಮಿಕ ರೋಗಗಳ ವಿಭಾಗದ ನಿರ್ದೇಶಕಿ ಅನ್ನಾ ತೆರೇಸಾ ಪಲಮರಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT