ಮಂಗಳವಾರ, ಸೆಪ್ಟೆಂಬರ್ 28, 2021
22 °C

ಕೋವಿಡ್: 3 ತಿಂಗಳಲ್ಲಿ ದೆಹಲಿಯ ಶೇ 80ರಷ್ಟು ಮಾದರಿಗಳಲ್ಲಿ ಡೆಲ್ಟಾ ರೂಪಾಂತರ ಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕಳೆದ ಮೂರು ತಿಂಗಳಲ್ಲಿ ದೆಹಲಿ ಸರ್ಕಾರವು ಪರೀಕ್ಷೆಗೆಂದು ಕಳುಹಿಸಿದ ಕನಿಷ್ಠ ಶೇ 80 ರಷ್ಟು ಮಾದರಿಗಳಲ್ಲಿ ಕೊರೊನಾವೈರಸ್‌ನ ಡೆಲ್ಟಾ ರೂಪಾಂತರ ಪತ್ತೆಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ರಾಜಧಾನಿಗಾಗಿ ಕೋವಿಡ್ ನಿರ್ವಹಣಾ ನೀತಿಗಳನ್ನು ರೂಪಿಸುವ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ, ಜುಲೈನಲ್ಲಿ ದೆಹಲಿಯಲ್ಲಿ ಜೀನೋಮ್ ಸೀಕ್ವೆನ್ಸಿಂಗ್‌ಗಾಗಿ ಕಳುಹಿಸಿದ ಮಾದರಿಗಳ ಪೈಕಿ ಶೇ 83.3ರಷ್ಟು ಮಾದರಿಗಳಲ್ಲಿ ಡೆಲ್ಟಾ ರೂಪಾಂತರ (B.1.617.2) ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆಯು ಮಾಹಿತಿ ನೀಡಿದೆ.

ಮೇ ಮತ್ತು ಜೂನ್‌ನಲ್ಲಿ ಈ ರೂಪಾಂತರವು ಕ್ರಮವಾಗಿ ಶೇ 81.7 ಮತ್ತು 88.6 ರಷ್ಟು ಮಾದರಿಗಳಲ್ಲಿ ಕಂಡುಬಂದಿದೆ. ಅಲ್ಲದೆ ಏಪ್ರಿಲ್‌ನಲ್ಲಿ ಶೇ 53.9 ಮಾದರಿಗಳಲ್ಲಿ ಕಂಡುಬಂದಿದೆ.

ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದಲ್ಲಿ (NCDC) ಇಲ್ಲಿಯವರೆಗೆ ಸಂಗ್ರಹಿಸಿದ 5,752 ಮಾದರಿಗಳಲ್ಲಿ 1,689 ರಲ್ಲಿ ಡೆಲ್ಟಾ ರೂಪಾಂತರ ಕಂಡುಬಂದಿದೆ. ಆಲ್ಫಾ ರೂಪಾಂತರ (B.1.1.7) 947 ಮಾದರಿಗಳಲ್ಲಿ ಪತ್ತೆಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಭಾರತದಲ್ಲಿ ಡೆಲ್ಟಾ ರೂಪಾಂತರವನ್ನು ಡಿಸೆಂಬರ್ 2020 ರಲ್ಲಿ ಗುರುತಿಸಲಾಯಿತು ಮತ್ತು ಬಳಿಕ ಅದು 95ಕ್ಕೂ ಹೆಚ್ಚು ದೇಶಗಳಲ್ಲಿ ಪತ್ತೆಯಾಗಿದೆ. ದೇಶದಲ್ಲಿ ಲಕ್ಷಾಂತರ ಜನರಿಗೆ ಸೋಂಕು ತಗುಲಿ ಸಾವಿರಾರು ಜನರ ಸಾವಿಗೆ ಕಾರಣವಾದ ಕೋವಿಡ್ ಎರಡನೇ ಅಲೆಯ ಸಮಯದಲ್ಲೇ ಈ ರೂಪಾಂತರವು ಕಂಡುಬಂತು. ಆಲ್ಫಾ ರೂಪಾಂತರವು ಕಳೆದ ವರ್ಷ ಬ್ರಿಟನ್‌ನಲ್ಲಿ ಮೊದಲು ಪತ್ತೆಯಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು