ಅಭಿವ್ಯಕ್ತಿ ಸ್ವಾತಂತ್ರ್ಯ ಇರದ ಪ್ರಜಾಪ್ರಭುತ್ವಕ್ಕೆ ಅರ್ಥವೇ ಇಲ್ಲ: ನಸ್ರೀನ್

ನವದೆಹಲಿ: ‘ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅರ್ಥವೇ ಇಲ್ಲ’ ಎಂದು ಬಾಂಗ್ಲಾದೇಶ ಮೂಲದ ಲೇಖಕಿ ತಸ್ಲಿಮಾ ನಸ್ರೀನ್ ಹೇಳಿದರು.
ಖ್ಯಾತ ಲೇಖಕ ಹಾಗೂ ಪತ್ರಿಕೆಯ ಸಂಪಾದಕ ರಾಜೇಂದ್ರ ಯಾದವ್ ಸ್ಮರಣಾರ್ಥ ಹಿಂದಿ ಭಾಷೆಯ ಸಾಹಿತ್ಯಕ ನಿಯತಕಾಲಿಕೆ ‘ಹಂಸ್’ ಹಮ್ಮಿಕೊಂಡಿದ್ದ ‘ರಾಜೇಂದ್ರ ಯಾದವ್ ಸ್ಮೃತಿ ಸಮಾರೋಹ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಾನು ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ವಿರುದ್ಧದ ಹೋರಾಟವನ್ನು ಮುಂದುವರಿಸುತ್ತೇನೆ. ಮಹಿಳೆಯರ ಹಕ್ಕುಗಳು, ನೈಜ ಜಾತ್ಯತೀತತೆ, ಮಾನವ ಹಕ್ಕುಗಳು ಹಾಗೂ ಕೋಮುಸೌಹಾರ್ದದ ಪರ ಹೋರಾಟವನ್ನು ನಿಲ್ಲಿಸುವುದಿಲ್ಲ. ಅನ್ಯಾಯ ಹಾಗೂ ಮೂಲಭೂತವಾದದ ವಿರುದ್ಧ ಧ್ವನಿ ಎತ್ತುವುದನ್ನು ಮುಂದುವರಿಸುವೆ’ ಎಂದು ಹೇಳಿದರು.
ಕಳೆದ ದಶಕದಲ್ಲಿ ‘ಹಂಸ್’ ಪತ್ರಿಕೆಯಲ್ಲಿ ಪ್ರಕಟವಾಗಿರುವ ತಸ್ಲಿಮಾ ನಸ್ರೀನ್ ಅವರ ಆಯ್ದ ಲೇಖನಗಳನ್ನು ಒಳಗೊಂಡಿರುವ ‘ಶಬ್ದವೇಧಿ, ಶಬ್ದಭೇದಿ’ ಸೇರಿದಂತೆ ಮೂರು ಕೃತಿಗಳನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ನಸ್ರೀನ್ ಅವರ ಲೇಖನಗಳನ್ನು ಅಮೃತಾ ಬೇರಾ ಅವರು ಅನುವಾದಿಸಿದ್ದು, ಪತ್ರಕರ್ತ ಸಂಗಮ್ ಪಾಂಡೆ ಸಂಪಾದಿಸಿದ್ದಾರೆ ಎಂದು ಪತ್ರಿಕೆಯ ಪ್ರಕಟಣೆ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.