ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನಯಾನ ಸಂಸ್ಥೆಗಳ ವಿಶೇಷ ಲೆಕ್ಕಪರಿಶೋಧನೆ ಆರಂಭಿಸಿದ ಡಿಜಿಸಿಎ

Last Updated 24 ಜುಲೈ 2022, 14:53 IST
ಅಕ್ಷರ ಗಾತ್ರ

ನವದೆಹಲಿ: ಹಿಂದಿನ 45 ದಿನಗಳಲ್ಲಿ ಹಲವು ವಿಮಾನಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ವಿಮಾನಯಾನ ಸಂಸ್ಥೆಗಳ ವಿಶೇಷ ಲೆಕ್ಕಪರಿಶೋಧನೆ ನಡೆಸಲು ಮುಂದಾಗಿದೆ.

‘ಹೋದ ತಿಂಗಳು ಡಿಜಿಸಿಎ, ಹಲವೆಡೆ ಸ್ಥಳ ಪರಿಶೀಲನೆ ನಡೆಸಿತ್ತು.ಪರಿಣತರಲ್ಲದ ಎಂಜಿನಿಯರ್‌ಗಳು ವಿಮಾನಗಳಲ್ಲಿನ ದೋಷಗಳನ್ನು ಪತ್ತೆಹಚ್ಚದೆಯೇ ಅವುಗಳ ಹಾರಾಟಕ್ಕೆ ಅನುಮತಿ ನೀಡಿರುವುದು ಈ ವೇಳೆ ಗಮನಕ್ಕೆ ಬಂದಿತ್ತು’ ಎಂದು ಅಧಿಕಾರಿಯೊಬ್ಬರು ಭಾನುವಾರ ಹೇಳಿದ್ದಾರೆ.

‘ವಿಮಾನಗಳ ನಿಲುಗಡೆ ಸ್ಥಳ ಹಾಗೂ ಅವುಗಳಿಗೆ ಬಿಡಿಭಾಗ ಪೂರೈಸುವ ಮಳಿಗೆಗಳನ್ನು ಗುರಿಯಾಗಿಟ್ಟುಕೊಂಡು ಲೆಕ್ಕಪರಿಶೋಧನೆ ನಡೆಸಲಾಗುತ್ತದೆ. ಈ ಕಾರ್ಯ ಸುಮಾರು ಎರಡು ತಿಂಗಳು ನಡೆಯಲಿದೆ’ ಎಂದು ಡಿಜಿಸಿಎ ಆದೇಶದಲ್ಲಿ ತಿಳಿಸಲಾಗಿದೆ.

‘ವಿಮಾನಯಾನ ಸಂಸ್ಥೆಗಳು ಹೊಂದಿರುವ ತಜ್ಞ ಮಾನವ ಸಂಪನ್ಮೂಲ, ಸಿಬ್ಬಂದಿಯ ಕೆಲಸದ ಅವಧಿ, ವಿಮಾನಗಳ ನಿರ್ವಹಣೆ ಸಂಬಂಧ ಸಂಸ್ಥೆಗಳ ಬಳಿ ಸದ್ಯ ಲಭ್ಯವಿರುವ ದತ್ತಾಂಶ, ಸಿಬ್ಬಂದಿ ಬಳಸುತ್ತಿರುವ ಉಪಕರಣಗಳ ಗುಣಮಟ್ಟ ಹೀಗೆ ವಿವಿಧ ಅಂಶಗಳನ್ನು ಗಮನದಲ್ಲಿಟ್ಟುಕೊಂಡೂ ಲೆಕ್ಕ ಪರಿಶೋಧನೆ ಮಾಡಲಾಗುತ್ತದೆ. ಇದು ಜುಲೈ 19ರಂದೇ ಆರಂಭವಾಗಿದೆ’ ಎಂದೂ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT