ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ವಿಳಂಬ: ಸ್ಪೈಸ್‌ಜೆಟ್‌ ವರದಿ ಕೇಳಿದ ಡಿಜಿಸಿಎ

Last Updated 12 ಜನವರಿ 2023, 19:44 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿಗೆ ಹೊರಟಿದ್ದ ವಿಮಾನದ ಪ್ರಯಾಣಿಕರು ಏರೋಬ್ರಿಡ್ಜ್‌ನಲ್ಲಿ ದೀರ್ಘ ಸಮಯದವರೆಗೆ ಕಾಯಬೇಕಾದ ಘಟನೆ ಕುರಿತು ನಾಗರಿಕ ವಿಮಾನ ಯಾನ ನಿರ್ದೇಶನಾಲಯವು (ಡಿಜಿಸಿಎ) ಗುರುವಾರ ಸ್ಪೈಸ್‌ಜೆಟ್‌ನಿಂದ ವರದಿ ಕೇಳಿದೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸಹ ಪ್ರಯಾಣಿಕರು ಏರೋಬ್ರಿಡ್ಜ್‌ನಲ್ಲಿ ದೀರ್ಘಕಾಲ ಕಾಯಬೇಕಾದ ಬಗ್ಗೆ ಪ್ರಯಾಣಿಕರೊಬ್ಬರು ವಿಡಿಯೊ ಮತ್ತು ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಸ್ಪೈಸ್ ಜೆಟ್ ವಿಮಾನ ಎಸ್ ಜಿ 8133 ದೆಹಲಿ-ಬೆಂಗಳೂರು ಪ್ರಯಾಣಿಕರು ಇದನ್ನು ತಿಳಿಸಿದ್ದಾರೆ.

ನಿಯಂತ್ರಕರು ಈ ಘಟನೆಯನ್ನು ಪರಿಶೀಲಿಸುತ್ತಿದ್ದಾರೆ ಮತ್ತು ವಿಮಾನಯಾನ ಸಂಸ್ಥೆಯಿಂದ ವರದಿ ಕೋರಿದ್ದಾರೆ ಎಂದು ಡಿಜಿಸಿಎ ಹಿರಿಯ ಅಧಿಕಾರಿಯೊಬ್ಬರು ಗುರುವಾರ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಬುಧವಾರ ರಾತ್ರಿ ಹವಾಮಾನ ಅಡಚಣೆಯಿಂದಾಗಿ ವಿಮಾನವು ವಿಳಂಬವಾಯಿತು. ಪ್ರಯಾಣಿಕರು ಭದ್ರತಾ ತಪಾಸಣೆ ಪೂರ್ಣಗೊಳಿಸಿದ್ದರಿಂದ ಅವರನ್ನು ಏರೋಬ್ರಿಡ್ಜ್‌ನಲ್ಲಿ ಕಾಯಲು ಮನವಿ ಮಾಡಲಾಯಿತು ಎಂದು ಸ್ಪೈಸ್ ಜೆಟ್ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT