ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ‍ಪತ್ತು ನಿರ್ವಹಣೆ ಕಾಲೇಜು ಹಂತದಲ್ಲಿ ಕಡ್ಡಾಯ ವಿಷಯವಾಗಿ ಬೋಧನೆ

ಉನ್ನತ ಶಿಕ್ಷಣ ಸಚಿವ ಅರುಣ್‌ ಸಾಹೂ ಮಾಹಿತಿ
Last Updated 24 ಜುಲೈ 2021, 6:52 IST
ಅಕ್ಷರ ಗಾತ್ರ

ಭುವನೇಶ್ವರ: ‘ಒಡಿಶಾದ ಕಾಲೇಜುಗಳಲ್ಲಿ ಮೊದಲ ವರ್ಷದ ಪಠ್ಯಕ್ರಮಗಳೊಂದಿಗೆ ವಿಪತ್ತು ನಿರ್ವಹಣೆಯ ವಿಷಯವನ್ನು ಕಡ್ಡಾಯವಾಗಿ ಬೋಧಿಸಲಾಗುವುದು’ ಎಂದು ಒಡಿಶಾದ ಉನ್ನತ ಶಿಕ್ಷಣ ಸಚಿವ ಅರುಣ್‌ ಸಾಹೂ ತಿಳಿಸಿದರು.

‘ಒಡಿಶಾ ರಾಜ್ಯ ಉನ್ನತ ಶಿಕ್ಷಣ ಸಮಿತಿಯು ಮೊದಲ ವರ್ಷದ (Plus III) ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ಪರಿಸರ ಅಧ್ಯಯನ ಮತ್ತು ವಿಪತ್ತು ನಿರ್ವಹಣೆಯ ಹೊಸ ವಿಷಯವನ್ನು ಕಡ್ಡಾಯವಾಗಿ ಬೋಧಿಸಲು ಸಿದ್ಧತೆ ನಡೆಸುತ್ತಿದೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

‘ಮೇ 29ರಂದು ಒಡಿಶಾ ಸಚಿವ ಸಂಪುಟವು ಪ್ರೌಢ ಶಾಲೆ ಮತ್ತು ಕಾಲೇಜು ಪಠ್ಯಕ್ರಮದಲ್ಲಿ ವಿಪತ್ತು ಮತ್ತು ಸಾಂಕ್ರಾಮಿಕ ನಿರ್ವಹಣೆ ವಿಷಯವನ್ನು ಸೇರಿಸಲು ನಿರ್ಧರಿಸಿತ್ತು. ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರ ನಿರ್ದೇಶನದ ಮೇರೆಗೆ ಈ ಸಂಬಂಧ ಸಿದ್ಧತೆಗಳನ್ನು ನಡೆಸಲಾಗುತ್ತಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT