ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚ್ಛೇದಿತ ಮುಸ್ಲಿಂ ಮಹಿಳೆ ಜೀವನಾಂಶ ಪಡೆಯಬಹುದು: ಅಲಹಾಬಾದ್‌ ಹೈಕೋರ್ಟ್‌ ತೀರ್ಪು

Last Updated 19 ಏಪ್ರಿಲ್ 2022, 13:50 IST
ಅಕ್ಷರ ಗಾತ್ರ

ಅಲಹಾಬಾದ್‌, ಉತ್ತರ ಪ್ರದೇಶ: ವಿಚ್ಛೇದಿತ ಮುಸ್ಲಿಂ ಮಹಿಳೆಯು ಮರು ಮದುವೆ ಆಗುವವರೆಗೂ ಹಾಗೂ ‘ಇದ್ದತ್‌’ ಸಮಯದಲ್ಲಿ ತನ್ನ ಪತಿಯಿಂದ ಜೀವನಾಂಶ ಪಡೆಯಲು ಅರ್ಹರು ಎಂದು ಅಲಹಾಬಾದ್‌ ಹೈಕೋರ್ಟ್‌ ಮಹತ್ವದ ತೀರ್ಪನ್ನು ನೀಡಿದೆ.

ನ್ಯಾಯಮೂರ್ತಿ ಕರುಣೇಶ್‌ ಸಿಂಗ್‌ ಪವಾರ್‌ ಅವರ ಏಕ ಸದಸ್ಯ ಪೀಠ ಈ ತೀರ್ಪು ನೀಡಿದೆ. ಕೆಳ ಹಂತದ ನ್ಯಾಯಾಲಯವು ವಿಚ್ಛೇದನದ ನಂತರ ಮುಸ್ಲಿಂ ಮಹಿಳೆಯ ಪತಿ ಆಕೆಗೆ ಜೀವನಾಂಶ ನೀಡುವಂತಿಲ್ಲ ಎಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ, ಮಹಿಳೆಯು ಅಲಹಾಬಾದ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದ್ದತ್‌ ಎಂದರೆ ಮುಸ್ಲಿಂ ಮಹಿಳೆಯ ಪತಿ ಮರಣ ಹೊಂದಿದರೆ ಅಥವಾ ಪತಿಯಿಂದ ವಿಚ್ಛೇದನ ಹೊಂದಿದರೆ ಮರು ಮದುವೆ ಆಗುವುದಕ್ಕೆ ಇರುವ ಮೂರು ತಿಂಗಳ ಕಾಲಾವಕಾಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT