ಗುರುವಾರ , ಅಕ್ಟೋಬರ್ 22, 2020
22 °C

ಹಿಂದಿ ಭಾಷೆಯಲ್ಲಿ ರೈಲ್ವೆಟಿಕೆಟ್ ಖಾತರಿ ಸಂದೇಶ‘ಡಿಎಂಕೆ, ಪಿಎಂಕೆ ಖಂಡನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ರೈಲು ಪ್ರಯಾಣಿಕರಿಗೆ ಟಿಕೆಟ್ ಕಾಯ್ದಿರಿಸಿದ ಬಗ್ಗೆ ಎಸ್‌ಎಂಎಸ್‌ ಸಂದೇಶ ಹಿಂದಿ ಭಾಷೆಯಲ್ಲಿ ಬರುತ್ತಿದೆ ಎಂದು ಡಿಎಂಕೆ ಮತ್ತು ಪಿಎಂಕೆ ಪಕ್ಷಗಳು ಆಕ್ಷೇಪಿಸಿವೆ. ಇದೂ ಹಿಂದಿ ಹೇರಿಕೆಯೇ ಆಗಿದೆ ಎಂದು ಡಿಎಂಕೆ ಸಂಸದೆ ತಮಿಜಾಚಿ ತಂಗಪಾಂಡಿಯನ್ ಟೀಕಿಸಿದ್ದಾರೆ.

ಹಿಂದಿ ಭಾಷೆಯ ಎಸ್‌ಎಂಎಸ್ ಸಂದೇಶದ ಚಿತ್ರವನ್ನು ಟ್ವೀಟ್ ಮಾಡಿರುವ ಅವರು, ‘ಹಿಂದಿ ಭಾಷೆ ಹೇರುವುದಿಲ್ಲ ಎಂಬ ಕೇಂದ್ರದ ಭರವಸೆ ನಂತರವೂ ಭಿನ್ನ ಮಾರ್ಗಗಳ ಮೂಲಕ ಇಂಥ ಯತ್ನ ನಡೆದಿದೆ. ಹಿಂದಿಯೇತರ ಭಾಷಿಕರ ಮೇಲೆ ಹಿಂದಿ ಹೇರಿಕೆ ಬೇಡ’ ಎಂದಿದ್ದಾರೆ.

‘ಇದು, ತಮ್ಮ ವ್ಯಾಪ್ತಿಗೆ ಬರುವುದಿಲ್ಲ. ಇ–ಟಿಕೆಟ್ ನೀಡುವ ಅಧಿಕೃತ ಸಂಸ್ಥೆಯಾಗಿರುವ ಐಆರ್‌ಸಿಟಿಸಿಗೆ ಬರಲಿದೆ’ ಎಂದು ದಕ್ಷಿಣ ರೈಲ್ವೆಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

‘ಜನರ ಭಾವನೆ ಗೌರವಿಸದೇ ಹಿಂದಿ ಹೇರಲಾಗುತ್ತಿದೆ’ ಎಂದು ಪಕ್ಷದ ಸಂಸದೆ ಕನಿಮೋಳಿ ಹೇಳಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಬೆಂಬಲಿಸುತ್ತಿರುವ ಪಿಎಂಕೆ ಸ್ಥಾಪಕ ಡಾ.ಎಸ್.ರಾಮದಾಸ್ ಅವರು, ‘ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು