ಮಂಗಳವಾರ, ಮಾರ್ಚ್ 28, 2023
26 °C
ತಮಿಳುನಾಡು ಬದಲು ತಮಿಳಗಂ ಪದ ಪ್ರಯೋಗ: ರಾಜ್ಯಪಾಲ ರವಿ ಸ್ಪಷ್ಟನೆ

ವಿಭಜಕ ಪಕ್ಷವೆಂದು ಬಿಂಬಿಸುವ ಹುನ್ನಾರ: ರವಿ ವಿರುದ್ಧ ಡಿಎಂಕೆ ಕಿಡಿ

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ‘ರಾಜ್ಯಕ್ಕೆ ತಮಿಳುನಾಡು ಎನ್ನುವ ಬದಲು ತಮಿಳಗಂ ಎಂದು ಸಂಬೋಧಿಸುವುದೇ ಸೂಕ್ತ’ ಎಂದು ಹೇಳಿದ್ದ ರಾಜ್ಯಪಾಲ ಆರ್‌.ಎನ್‌.ರವಿ ಅವರು ಈ ಕುರಿತು ಬುಧವಾರ ಸ್ಪಷ್ಟನೆ ನೀಡಿದ್ದಾರೆ. ಅವರ ಸ್ಪಷ್ಟನೆಯನ್ನು ಆಡಳಿತಾರೂಢ ಡಿಎಂಕೆ, ಗುರುವಾರ ತಿರಸ್ಕರಿಸಿದೆ. 

‘ಪ್ರತ್ಯೇಕ ರಾಷ್ಟ್ರಕ್ಕಾಗಿ ಡಿಎಂಕೆ ಹೋರಾಟ ನಡೆಸುತ್ತಿದೆ. ನಮ್ಮದು ದೇಶ ವಿಭಜಕ ಪಕ್ಷವೆಂದು ಬಿಂಬಿಸುವ ಉದ್ದೇಶದಿಂದಲೇ ರವಿ ಆ ರೀತಿ ಹೇಳಿಕೆ ನೀಡಿದ್ದರು’ ಎಂದು ಡಿಎಂಕೆ ವಕ್ತಾರ ಟಿ.ಕೆ.ಎಸ್‌.ಇಳಂಗೋವನ್‌ ಆರೋಪಿಸಿದ್ದಾರೆ.

‘ನಾವು ಪ್ರತ್ಯೇಕ ರಾಷ್ಟ್ರಕ್ಕಾಗಿ ಒತ್ತಾಯಿಸಿಲ್ಲ. ಆಡಳಿತಾತ್ಮಕ ದೃಷ್ಟಿಯಿಂದ ರಾಜ್ಯಕ್ಕೆ ಹೆಚ್ಚಿನ ಅಧಿಕಾರ ಒದಗಿಸುವಂತೆ ಕೇಳಿದ್ದೇವೆ. ತಮಿಳುನಾಡು, ಅದರ ಸಂಸ್ಕೃತಿ ಹಾಗೂ ಭಾಷೆಯನ್ನು ಪ್ರಶ್ನಿಸುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ’ ಎಂದು ಅವರು ಹೇಳಿದ್ದಾರೆ.

‘ರಾಜ್ಯದ ಐತಿಹಾಸಿಕ ಸಂಸ್ಕೃತಿಯನ್ನು ಉಲ್ಲೇಖಿಸಿ ಮಾತನಾಡುವಾಗ ತಮಿಳಗಂ ಪದ ಪ್ರಯೋಗಿಸಿದ್ದೆ. ಇದಕ್ಕೆ ವಿವಾದದ ರೂಪ ನೀಡಲಾಯಿತು. ರಾಜ್ಯಪಾಲರು ‘ತಮಿಳುನಾಡು’ ಹೆಸರಿಗೆ ವಿರುದ್ಧವಾಗಿದ್ದಾರೆ ಎಂದು ಬಿಂಬಿಸಲಾಯಿತು. ವಿವಾದ ಹಾಗೂ ಗೊಂದಲಗಳಿಗೆ ತೆರೆ ಎಳೆಯುವ ಉದ್ದೇಶದಿಂದ ಸ್ಪಷ್ಟನೆ ನೀಡಿದ್ದೇನೆ’ ಎಂದು ರಾಜ್ಯಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದರು.

ಡಿಎಂಕೆ ವಕ್ತಾರನ ಮೇಲೆ ಮಾನನಷ್ಟ ಮೊಕದ್ದಮ್ಮೆ 

ಚೆನ್ನೈ: ತಮ್ಮ ವಿರುದ್ಧ ಮಾನಹಾನಿಕರ ಹಾಗೂ ನಿಂದನಾತ್ಮಕ ಹೇಳಿಕೆ ನೀಡಿದ್ದ ಡಿಎಂಕೆ ವಕ್ತಾರ ಶಿವಾಜಿ ಕೃಷ್ಣಮೂರ್ತಿ ವಿರುದ್ಧ ರಾಜ್ಯಪಾಲ ರವಿ ಅವರು ಗುರುವಾರ ಮಾನನಷ್ಟ ಮೊಕದ್ದಮ್ಮೆ ದಾಖಲಿದ್ದಾರೆ.

ಕೃಷ್ಣಮೂರ್ತಿ ವಿರುದ್ಧ ಐಪಿಸಿ ಸೆಕ್ಷನ್‌ 499 ಮತ್ತು 500 ರ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದು, ನ್ಯಾಯಾಲಯವು ಇದನ್ನು ಶೀಘ್ರವೇ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. 

ಇದೇ 14ರಂದು ಮಾತನಾಡಿದ್ದ ಕೃಷ್ಣಮೂರ್ತಿ, ರಾಜ್ಯಪಾಲರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ್ದರು. ಹೀಗಾಗಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು