ಮಂಗಳವಾರ, ಜೂನ್ 15, 2021
23 °C

Exit Poll: ತಮಿಳುನಾಡಲ್ಲಿ ಡಿಎಂಕೆಗೆ ಅಧಿಕಾರ, ಅಣ್ಣಾಡಿಎಂಕೆಗೆ ಮುಖಭಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಒಂದೇ ಹಂತದಲ್ಲಿ ಚುನಾವಣೆ ನಡೆದ ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್‌ ನೇತೃತ್ವದ ಡಿಎಂಕೆ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಸಮಿಕ್ಷೆಗಳು ಭವಿಷ್ಯ ನುಡಿದಿವೆ. 

ತಮಿಳುನಾಡು ವಿಧಾನಸಭೆಯ 234 ಕ್ಷೇತ್ರಗಳ ಪೈಕಿ ಬಹುಮತಕ್ಕೆ 118 ಸ್ಥಾನದ ಅಗತ್ಯವಿದ್ದು, ಡಿಎಂಕೆ 160–170 ಸ್ಥಾನ ಗೆಲ್ಲಲಿದೆ ಎಂದು ರಿಪಬ್ಲಿಕ್ ಟಿವಿ ಮತ್ತು ಸಿಎನ್‌ಎಕ್ಸ್ ಸಮೀಕ್ಷೆ ಹೇಳಿದೆ. ಅಣ್ಣಾಡಿಎಂಕೆ ಮೈತ್ರಿಕೂಟವು 58–68 ಸ್ಥಾನ ಗೆಲ್ಲುವ ಮೂಲಕ ಅಧಿಕಾರ ಕಳೆದುಕೊಳ್ಳಲಿದ್ದು, ಎಎಂಎಂಕೆ ಮೈತ್ರಿಯು 4–6 ಸ್ಥಾನ ಗೆಲ್ಲಲಿದೆ ಎಂದು ತಿಳಿಸಿದೆ.  
 
ಇನ್ನು, ಪಿ–ಮಾರ್ಕ್ ಸಮೀಕ್ಷೆಯು ಸಹ ಡಿಎಂಕೆ ಅಧಿಕರಕ್ಕೆ ಬರುವುದು ಖಚಿತ ಎಂದು ಹೇಳಿದೆ. ಡಿಎಂಕೆ ಪಕ್ಷವು 165-190 ಸ್ಥಾನ ಗೆದ್ದರೆ, ಅಣ್ಣಾಡಿಎಂಕೆ ಮೈತ್ರಿಯು ಕೇವಲ 40-65 ಸ್ಥಾನ ಗೆಲ್ಲಿದೆ ಎಂದಿದೆ. ಎಎಂಎಂಕೆ ಮೈತ್ರಿಯು 1–3 ಸ್ಥಾನಕ್ಕೆ ಸೀಮಿತಗೊಳ್ಳುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದೆ.

ಇಂಡಿಯಾ ಟುಡೇ–ಆಕ್ಸಿಸ್ ಸಮೀಕ್ಷೆಯೂ ತಮಿಳುನಾಡಲ್ಲಿ ಡಿಎಂಕೆ ಗೆಲುವಿನ ಪತಾಕೆ ಹಾರಿಸಲಿದೆ ಎಂದು ಹೇಳಿದೆ.  175-195 ಸ್ಥಾನ ಗೆಲ್ಲುವ ಮೂಲಕ ಎಂ,ಕೆ.  ಸ್ಟಾಲಿನ್ ನೇತ್ಋತ್ವದಲ್ಲಿ ಪಕ್ಷವು ಅಧಿಕಾರಕ್ಕೆ ಬರಲಿದ್ದು, 38-54 ಉಳಿಸಿಕೊಳ್ಳುವ ಅಣ್ಣಾಡಿಎಂಕೆ ಅಧಿಕರ ಕಳೆದುಕೊಳ್ಳುವುದಾಗಿ ಹೇಳಿದೆ.

ಎಬಿಪಿ–ಸಿವೋಟರ್ ಸಮೀಕ್ಷೆಯ ಪ್ರಕಾರ, ಅಣ್ಣಾಡಿಎಂಕೆ 58-70 ಸ್ಥಾನ ಗೆಲ್ಲಲಿದ್ದು,  ಡಿಎಂಕೆಯು 160-172 ಕ್ಷೇತ್ರ ಗೆದ್ದು ಅಧಿಕಾರ ಪಡೆಯಲಿದೆ.

ಇದನ್ನೂ ಓದಿ.. Exit Poll: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಕಾರಕ್ಕೆ, ಬಿಜೆಪಿ ಪ್ರಬಲ ಪೈಪೋಟಿ

    

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು