ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸರ್ಕಾರದ ನಿರ್ದಯತೆ, ಕೊರೊನಾದಿಂದ ವೈದ್ಯರನ್ನು ರಕ್ಷಿಸಿ: ರಾಹುಲ್‌ ಗಾಂಧಿ

Last Updated 4 ಜೂನ್ 2021, 15:11 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ಪಿಡುಗು ನಿರ್ವಹಣೆಗೆ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಕ್ರಮವನ್ನು ಟೀಕಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಬಿಜೆಪಿ ಸರ್ಕಾರದ ನಿರ್ದಯತೆ ಮತ್ತು ಕೋವಿಡ್‌ನಿಂದ ವೈದ್ಯರನ್ನು ರಕ್ಷಿಸಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.

ಕೋವಿಡ್–19 ರೋಗ ಹರಡುವಿಕೆಯ ತಪಾಸಣೆ ಮತ್ತು ಲಸಿಕಾ ಅಭಿಯಾನದಲ್ಲಿ ಸರ್ಕಾರ ಅನುಸರಿಸುತ್ತಿರುವ ನೀತಿಗಳನ್ನು ರಾಹುಲ್‌ ಗಾಂಧಿ ಟ್ವಿಟರ್‌ನಲ್ಲಿ ಟೀಕಿಸಿದ್ದಾರೆ.

‘ವೈದ್ಯರಿಗೆ ಕೊರೊನಾ ವೈರಸ್ ಮತ್ತು ಬಿಜೆಪಿ ಸರ್ಕಾರದ ನಿರ್ದಯತೆಯಿಂದ ರಕ್ಷಣೆ ಬೇಕು. ಸಂರಕ್ಷಕರನ್ನು ಉಳಿಸಿ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಕೋವಿಡ್‌ ಲಸಿಕೆಗಳ ಬಗ್ಗೆ ಎಲ್ಲಾ ರಾಜ್ಯಗಳು ಒಮ್ಮತದ ಧ್ವನಿಯಲ್ಲಿ ಮಾತನಾಡುವಂತೆ ಮನವಿ ಮಾಡಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ವಿರುದ್ಧಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ವಾಗ್ದಾಳಿ ಮಾಡಿದ್ದಾರೆ.

‘ಲಸಿಕೆ ಸಮಸ್ಯೆಯನ್ನು ಕೇಂದ್ರ ವರ್ಸಸ್ ರಾಜ್ಯಗಳು ಎಂದು ಮಾಡಿದವರು ಯಾರು? ಕೇಂದ್ರ ಸರ್ಕಾರವು 18ರಿಂದ 44 ವರ್ಷ ವಯಸ್ಸಿನವರಿಗೆ ಲಸಿಕೆ ನೀಡುವುದನ್ನು ಕೈಬಿಡುವಂತೆ ಏಕಪಕ್ಷೀಯವಾಗಿ ನಿರ್ಧರಿಸಿದವರು ಯಾರು? ಈ ನೀತಿಯನ್ನು ರೂಪಿಸುವ ಮೊದಲು ರಾಜ್ಯಗಳ ಜತೆ ಏಕೆ ಸಮಾಲೋಚಿಸಲಿಲ್ಲ? ಈ ಪ್ರಶ್ನೆಗಳನ್ನು ನೀವು ಪ್ರಧಾನಿಗೆ ಏಕೆ ಕೇಳಬಾರದು? ಎಂದು ಜೈರಾಮ್‌ ರಮೇಶ್, ಜಗನ್‌ ವಿರುದ್ಧ ಹರಿಹಾಯ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT