ಭಾನುವಾರ, ಆಗಸ್ಟ್ 14, 2022
28 °C
ಪೊಲೀಸರ ಎ‌ಚ್ಚರಿಕೆ

‘ನಕಲಿ ಆಕ್ಸಿಮೀಟರ್‌ ಆ್ಯಪ್‌ಗಳನ್ನು ಬಳಸಬೇಡಿ’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ದೇಶದಲ್ಲಿ ಕೋವಿಡ್‌ ಉಲ್ಬಣಗೊಳ್ಳುತ್ತಿದ್ದಂತೆ ಆಕ್ಸಿಮೀಟರ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದನ್ನೇ ಅಸ್ತ್ರವನ್ನಾಗಿ ಬಳಸುತ್ತಿರುವ ಸೈಬರ್‌ ಕಳ್ಳರು ಗ್ರಾಹಕರ ಖಾಸಗಿ ಮಾಹಿತಿಯನ್ನು ಕದಿಯುತ್ತಿದ್ದಾರೆ. ಹಾಗಾಗಿ  ಮೊಬೈಲ್‌ಗೆ ಆಕ್ಸಿಮೀಟರ್‌ಗೆ ಸಂಬಂಧಿಸಿದ ನಕಲಿ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಬೇಡಿ. ಈ ಅಪ್ಲಿಕೇಷನ್‌ಗಳು ಮೊಬೈಲ್‌ನಿಂದ ನಿಮ್ಮ ಖಾಸಗಿ ಮಾಹಿತಿ ಮತ್ತು ಬಯೋಮೆಟ್ರಿಕ್ ಡೇಟಾವನ್ನು ಕದಿಯುವ ಸಾಧ್ಯತೆಗಳಿವೆ ಎಂದು ತಮಿಳುನಾಡು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಲಿಂಕ್‌ಗಳನ್ನು ಒಳಸಿಕೊಂಡು ಗ್ರಾಹಕರ ಖಾಸಗಿ ಮಾಹಿತಿ ಮತ್ತು ಬೆರಳಚ್ಚುನಂತಹ ಮಾಹಿತಿಯನ್ನು ಕದಿಯಲಾಗುತ್ತದೆ.

ಆಮ್ಲಜನಕದ ಪ್ರಮಾಣವನ್ನು ಪತ್ತೆ ಹಚ್ಚುವುದಾಗಿ ಪ್ರತಿಪಾದಿಸುವ ನಕಲಿ ಆಕ್ಸಿಮೀಟರ್‌ ಆ್ಯಪ್‌ಗಳ ಮೂಲಕ ಗ್ರಾಹಕರ ಖಾಸಗಿ ಮಾಹಿತಿಗಳನ್ನು ಕದಿಯಲಾಗುತ್ತಿದೆ. ಈ ಆ್ಯಪ್‌ಗಳು ಬೆರಳಚ್ಚು ಮೂಲಕ ಆಮ್ಲಜನಕದ ಪ್ರಮಾಣವನ್ನು ಪರಿಶೀಲಿಸಿ, ಎಸ್‌ಎಂಎಸ್‌ ಮೂಲಕ ಅದರ ಫಲಿತಾಂಶವನ್ನು ನೀಡುತ್ತದೆ. ಇದಕ್ಕೂ ಮುನ್ನ ಹಲವು ಫೀಚರ್‌ಗಳನ್ನು ಬಳಸಲು ಅನುಮತಿಯನ್ನು ಕೇಳುತ್ತದೆ.

‘ಒಂದು ವೇಳೆ ಅನುಮತಿ ಸಿಕ್ಕಲ್ಲಿ ಒಟಿಪಿ, ಪಾಸ್‌ವರ್ಡ್‌ಗಳು, ಕಾರ್ಡ್‌ ಮಾಹಿತಿ, ಫೋಟೊ ಮತ್ತು ಬ್ಯಾಂಕಿಗೆ ಸಂಬಂಧಿಸಿದ ಮಾಹಿತಿಗಳನ್ನು ಸುಲಭವಾಗಿ ಕದಿಯಬಹುದಾಗಿದೆ. ಅಲ್ಲದೆ ಕದೀಮರು, ಇತರೆ ಆ್ಯಪ್‌ಗಳ ಮೂಲಕ ಆಧಾರ ಕಾರ್ಡ್‌ನ ಮಾಹಿತಿಯನ್ನು ಸಂಗ್ರಹಿಸುತ್ತಾರೆ’ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

‘ಈಗಾಗಲೇ ಮಹಾರಾಷ್ಟ್ರ, ಗುಜರಾತ್‌ ಸರ್ಕಾರ ಈ ಬಗ್ಗೆ ಎಚ್ಚರಿಕೆ ನೀಡಿದೆ. ಹೀಗಾಗಿ, ಆ್ಯಪ್‌ಗಳನ್ನು ಸರಿಯಾದ ಮೂಲಗಳಿಂದ ಡೌನ್‌ಲೋಡ್‌ ಮಾಡಿ’ ಎಂದು ತಮಿಳುನಾಡು ಪೊಲೀಸರು ಫೇಸ್‌ಬುಕ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ www.cybercrime.gov.in. ದೂರು ಸಲ್ಲಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು