ಗುರುವಾರ , ಅಕ್ಟೋಬರ್ 22, 2020
27 °C

ಬಾಲಿವುಡ್‌ ಡ್ರಗ್ಸ್‌ ಪ್ರಕರಣ: ಕ್ಷಿತಿಜ್ ನ್ಯಾಯಾಂಗ ಬಂಧನ ವಿಸ್ತರಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಬಾಲಿವುಡ್‌ ಡ್ರಗ್ಸ್‌ ಜಾಲದಡಿ ಬಂಧಿಸಲಾಗಿದ್ದ ಧರ್ಮಾಟಿಕ್‌‌ ಎಂಟರ್‌ಟೈನ್‌ಮೆಂಟ್‌ನ ಮಾಜಿ‌ ಕಾರ್ಯನಿರ್ವಾಹಕ ನಿರ್ಮಾಪಕ ಕ್ಷಿತಿಜ್ ರವಿ ಪ್ರಸಾದ್‌ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಎನ್‌ಡಿಪಿಎಸ್ ವಿಶೇಷ‌ ನ್ಯಾಯಾಲಯವು ಅ.6 ತನಕ ವಿಸ್ತರಿಸಿದೆ.

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ಪ್ರಕರಣ ಸಂಬಂಧಿತ ಡ್ರಗ್ಸ್‌ ಜಾಲದಡಿ ರವಿ ಪ್ರಸಾದ್‌ ಅವರನ್ನು  ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದರು. ಆರೋಪಿ ಕರ್ಮಜೀತ್‌ ಅವರೊಂದಿಗೆ ಸೇರಿ ರವಿ ಪ್ರಸಾದ ಡ್ರಗ್ಸ್‌ ಶೇಖರಣೆ ಮಾಡಿದ್ದರು ಎಂದು ನ್ಯಾಯಾಲಯಕ್ಕೆ ಎನ್‌ಸಿಬಿ  ತಿಳಿಸಿತ್ತು.

ರವಿ ಪ್ರಸಾದ್‌ ಕಸ್ಟಡಿ ಅವಧಿ ಪೂರ್ಣಗೊಂಡ ಕಾರಣ ಅವರನ್ನು ಶನಿವಾರ ಎನ್‌ಡಿಪಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯವು ರವಿ ಪ್ರಸಾದ್‌ ನ್ಯಾಯಾಂಗ ಬಂಧನವನ್ನು ಅ.6 ತನಕ ವಿಸ್ತರಿಸಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು