ಗುವಾಹಟಿ: ಭೂ ಕುಸಿತದಲ್ಲಿ ಇಬ್ಬರು ಕಾರ್ಮಿಕರು ಸಾವು, ನಾಲ್ವರಿಗೆ ಗಾಯ

ಗುವಾಹಟಿ: ‘ಈಶಾನ್ಯ ಗಡಿನಾಡು ರೈಲ್ವೆಯ (ಎನ್‌ಎಫ್‌ಆರ್) ಗುವಾಹಟಿ– ಲುಮ್ಡಿಂಗ್ ವಿಭಾಗದಲ್ಲಿನ ರೈಲ್ವೆ ಕೆಳಸೇತುವೆ ನಿರ್ಮಾಣದ ವೇಳೆ ಶನಿವಾರ ಭೂ ಕುಸಿತ ಉಂಟಾಗಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಏಳು ಮಂದಿಯನ್ನು ರಕ್ಷಿಸಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
‘ಪನ್ಬಾರಿ ಮತ್ತು ಠಾಕೂರ್ಕುಚಿ ರೈಲ್ವೆ ನಿಲ್ದಾಣದ ನಡುವಿನ ಸುರಂಗ ನಿರ್ಮಾಣದ ವೇಳೆ ಈ ಘಟನೆ ನಡೆದಿದ್ದು, ಅವಶೇಷಗಳಡಿ 9 ಮಂದಿ ಕಾರ್ಮಿಕರು ಸಿಲುಕಿದ್ದರು. ಸ್ಥಳೀಯ ಅಧಿಕಾರಿಗಳ ಸಹಾಯದಿಂದ 7 ಮಂದಿಯನ್ನು ರಕ್ಷಿಸಲಾಯಿತು. ಆದರೆ ಇಬ್ಬರು ಕಾರ್ಮಿಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ’ ಎಂದು ಎನ್‌ಎಫ್‌ಆರ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶುಭಾನನ ಚಂದಾ ಅವರು ಮಾಹಿತಿ ನೀಡಿದರು.
‘ಗಾಯಾಳುಗಳನ್ನು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ರೈಲ್ವೆ ಇಲಾಖೆ, ಗಾಯಾಳುಗಳಿಗೆ ಎಲ್ಲಾ ರೀತಿಯ ನೆರವು ನೀಡಲು ಸಿದ್ಧವಿದೆ’ ಎಂದು ಅವರು ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.