ಸೋಮವಾರ, ಅಕ್ಟೋಬರ್ 26, 2020
24 °C

'ಲಸಿಕೆ ದಾಸ್ತಾನು ವಾಸ್ತವ ಮಾಹಿತಿಗೆ ವ್ಯವಸ್ಥಿತ ನೆಟ್‌ವರ್ಕ್'

ಪಿಟಿಐ Updated:

ಅಕ್ಷರ ಗಾತ್ರ : | |

ಕೋವಿಡ್‌ ಲಸಿಕೆ– ಪ್ರಾತಿನಿಧಿಕ ಚಿತ್ರ

ನವದೆಹಲಿ: ದೇಶದಲ್ಲಿ ಲಭ್ಯವಿರುವ ಲಸಿಕೆ ದಾಸ್ತಾನು ಕುರಿತು ವಾಸ್ತವ ಮಾಹಿತಿ ಒದಗಿಸಲಿರುವ ಎಲೆಕ್ಟ್ರಾನಿಕ್‌ ವ್ಯಾಕ್ಸಿನ್‌ ಇಂಟಲಿಜೆನ್ಸ್‌ ನೆಟ್‌ವರ್ಕ್ (ಇವಿನ್) ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲಾಗುವುದು. ಇದರು, ಅಗತ್ಯವನ್ನು ಆಧರಿಸಿ ಕೋವಿಡ್-19 ಲಸಿಕೆ ಪೂರೈಸಲು ಸಹಕಾರಿಯಾಗಲಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಭಾನುವಾರ ತಿಳಿಸಿದೆ. 

ಈ ಸಂಬಂಧ ತಜ್ಞರ ತಂಡವನ್ನು ರಚಿಸಲಾಗಿದೆ. ಈ ತಂಡವು ಯಾವ ಗುಂಪಿನ ರೋಗಿಗಳಿಗೆ ಮೊದಲು ಲಸಿಕೆ ನೀಡಬೇಕು,  ಆಯ್ಕೆ, ಲಸಿಕೆಯ ವಿತರಣಾ ಕಾರ್ಯವಿಧಾನ ಕುರಿತು ಸರ್ಕಾರಕ್ಕೆ ಮಾರ್ಗದರ್ಶನ ನೀಡಲಿದೆ ಎಂದು ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್‌ ಚೌಬೆ ತಿಳಿಸಿದರು.

ಎಲೆಕ್ಟ್ರಾನಿಕ್‌ ವ್ಯಾಕ್ಸಿನ್‌ ಇಂಟಲಿಜೆನ್ಸ್‌ ನೆಟ್‌ವರ್ಕ್ ಅಡಿ ಲಸಿಕೆ ದಾಸ್ತಾನು, ಸುಮಾರು 25 ಸಾವಿರ ನಿಯೋಜಿತ ಶೀತಲಗೃಹಗಳಲ್ಲಿ ತಾಪಮಾನ ಪ್ರಮಾಣದ ಮಾಹಿತಿ ತಿಳಿಯಲು ಸಹಕಾರಿಯಾಗಿರಲಿದೆ ಎಂದು ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು