ಉದಕಮಂಡಲ (ತಮಿಳುನಾಡು): ತಮಿಳುನಾಡಿನ ಕೃಷ್ಣಗಿರಿ ಸಮೀಪ ಸೆರೆ ಹಿಡಿಯಲಾಗಿದ್ದ 15 ವರ್ಷದ ಆನೆಯನ್ನು ಗುರುವಾರ ಮುಂಜಾನೆ ಸುರಕ್ಷಿತವಾಗಿ ಅಸುವರಮಟ್ಟಂನಲ್ಲಿರುವ ಮುದುಮಲೈ ಹುಲಿ ಸಂರಕ್ಷಿತ ಅರಣ್ಯ (ಎಂಟಿಆರ್) ಪ್ರದೇಶಕ್ಕೆ ಬಿಡಲಾಗಿದೆ.

ಈ ಗಂಡು ಆನೆ ಕೆಲವು ದಿನಗಳಿಂದ ಕೃಷ್ಣಗಿರಿ ಸುತ್ತಮುತ್ತಾ ತೀವ್ರ ಉಪಟಳ ನೀಡುತ್ತಿತ್ತು. ಅರಣ್ಯಾಧಿಕಾರಿಗಳ ಸತತ ಪ್ರಯತ್ನದ ನಂತರ 48 ಗಂಟೆಗಳ ಹಿಂದೆ, ಆನೆಯನ್ನು ಹಿಡಿಯಲಾಯಿತು. ಈಗ ಅದನ್ನು ಎಂಟಿಆರ್ ಅರಣ್ಯದೊಳಕ್ಕೆ ಬಿಡಲಾಗಿದೆ.

ಸೌಮ್ಯ ಸ್ವಭಾವದ ಆನೆಯ ಚಲನವಲನಗಳನ್ನು ಅರಣ್ಯ ಅಧಿಕಾರಿಗಳ ತಂಡದವರು ನಿರಂತರವಾಗಿ ನಿಗಾ ವಹಿಸುತ್ತಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಅಸುವರಮಟ್ಟಂ ಅರಣ್ಯದಲ್ಲಿ 50 ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಕೊಳವನ್ನು ನಿರ್ಮಿಸಲಾಗಿದೆ. ಇದಕ್ಕೆ ಸೌರಶಕ್ತಿ ಚಾಲಿತ ಮೋಟಾರ್ನಿಂದ ಕೊಳವೆಬಾವಿಯ ನೀರನ್ನು ತುಂಬಿಸಲಾಗುತ್ತದೆ. ಹೀಗಾಗಿ ಆನೆಯಂತಹ ಪ್ರಾಣಿಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.