ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಪಿ ಮುಖಂಡ ಪಂಕಜ್‌ ಗುಪ್ತಾಗೆ ಇ.ಡಿ ನೋಟಿಸ್‌ ಜಾರಿ

Last Updated 13 ಸೆಪ್ಟೆಂಬರ್ 2021, 11:14 IST
ಅಕ್ಷರ ಗಾತ್ರ

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಆಮ್ ಅದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಕಾರ್ಯದರ್ಶಿ ಪಂಕಜ್‌ ಗುಪ್ತಾ ಅವರಿಗೆ ಜಾರಿ ನಿರ್ದೇಶಾನಲಯ (ಇ.ಡಿ) ನೋಟಿಸ್‌ ಜಾರಿ ಮಾಡಿದೆ. ಎಎಪಿ ಇದನ್ನು ‘ಬಿಜೆಪಿಯ ಮುಂಚೂಣಿ ಸಂಘಟನೆ’ಯಿಂದ ಬಂದ ‘ಪ್ರೇಮಪತ್ರ’ ಎಂದು ಬಣ್ಣಿಸಿದೆ.

ಚುನಾವಣೆಯಲ್ಲಿ ಸೋಲಿಸಲು ವಿಫಲವಾದ ಬಿಜೆಪಿ, ಇಂತಹ ಕ್ರಮಗಳಿಂದ ವ್ಯಕ್ತಿತ್ವಕ್ಕೆ ಕುಂದು ತರುತ್ತಿದೆ ಎಂದು ಎಎಪಿ ಆರೋಪಿಸಿದೆ. ಅಲ್ಲದೆ, ‘ಮುಂದಿನ ವರ್ಷ ಚುನಾವಣೆ ನಡೆಯುವ ಪಂಜಾಬ್‌, ಉತ್ತರಾಖಂಡ, ಉತ್ತರಪ್ರದೇಶದಲ್ಲಿ ಎಎಪಿ ಜನಪ್ರಿಯತೆಯು ಬಿಜೆಪಿಯನ್ನು ಕುಗ್ಗಿಸಿರುವುದಕ್ಕೆ ಇದು ನಿದರ್ಶನ’ ಎಂದು ಬಿಂಬಿಸಲು ಉದ್ದೇಶಿಸಿದೆ.

ಪಂಜಾಬ್‌ನ ಮಾಜಿ ಶಾಸಕ, ಎಎಪಿ ಪಕ್ಷದ ಸುಖ್‌ಪಾಲ್‌ ಸಿಂಗ್‌ ಖೈರಾ ವಿರುದ್ಧ ದಾಖಲಾದ ಪ್ರಕರಣದ ಸಂಬಂಧ ತನಿಖೆಗೆ ಸೆ. 22ರಂದು ಹಾಜರಾಗಬೇಕು ಎಂದು ಗುಪ್ತಾ ಅವರಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎಎಪಿ ಪರವಾಗಿ ಒಂದು ಲಕ್ಷ ಡಾಲರ್ ನಿಧಿ ಸಂಗ್ರಹಿಸಿದ್ದ, ಡ್ರಗ್ಸ್ ಮಾರಾಟದ ಆರೋಪ ಖೈರಾ ಮೇಲಿದೆ. ಎಎಪಿ ಅಭ್ಯರ್ಥಿಯಾಗಿ 2017ರಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆಗೆ ಆಯ್ಕೆಯಾಗಿದ್ದ ಖೈರಾ ಅವರು ಬಳಿಕ ಪಂಜಾಬ್ ಏಕ್ತಾ ಪಾರ್ಟಿ ರಚಿಸಲು ಎಎಪಿ ತ್ಯಜಿಸಿದ್ದರು. ಜೂನ್‌ ತಿಂಗಳಲ್ಲಿ ಕಾಂಗ್ರೆಸ್‌ಗೆ ಸೇರಿದ್ದರು.

ಎಎಪಿ ನಾಯಕ ರಾಘವ್‌ ಚಂದಾ ಅವರು ಇ.ಡಿ ನೋಟಿಸ್‌ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಯಾವ ಪ್ರಕರಣಕ್ಕೆ ಸಂಬಂಧಿಸಿ ತನಿಖಾ ಸಂಸ್ಥೆ ನೋಟಿಸ್‌ ನೀಡಿದೆ ಎಂಬುದು ತಿಳಿದುಬಂದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT