ರಸಗೊಬ್ಬರ ಪೂರೈಸದಿದ್ದರೆ ಅನಗತ್ಯ ಅಶಾಂತಿ ನಿರ್ಮಾಣ–ಒಡಿಶಾ ಸಿ.ಎಂ ಎಚ್ಚರಿಕೆ

ಭುವನೇಶ್ವರ: ರಾಜ್ಯಕ್ಕೆ ಸಮರ್ಪಕ ಪ್ರಮಾಣದಲ್ಲಿ ರಸಗೊಬ್ಬರ ಪೂರೈಸುವಂತೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಖಾರಿಫ್ ಕೃಷಿ ಅವಧಿಯಲ್ಲಿ ರೈತರು ರಸಗೊಬ್ಬರದ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಮನ್‌ಸುಖ್ ಮಾಂಡವೀಯ ಅವರಿಗೆ ಪತ್ರ ಬರೆದಿರುವ ಅವರು, ರಸಗೊಬ್ಬರ ಕೊರತೆಯು ಹೆಚ್ಚಿನ ಜಿಲ್ಲೆಗಳಲ್ಲಿ ಅನಗತ್ಯವಾಗಿ ಕಾನೂನು ಸುವ್ಯವಸ್ಥೆಯ ಸಮಸ್ಯೆಗಳನ್ನು ತರಬಹುದು ಎಂದು ಅವರು ಉಲ್ಲೇಖಿಸಿದ್ದಾರೆ.
ಆದ್ದರಿಂದ, ಹಿಂಬಾಕಿಯೂ ಸೇರಿದಂತೆ ರಾಜ್ಯಕ್ಕೆ ಮಾಸಿಕವಾಗಿ ನಿಗದಿಯಾಗಿರುವಷ್ಟು ರಸಗೊಬ್ಬರ ಪೂರೈಸಲು ಕ್ರಮ ತೆಗೆದುಕೊಳ್ಳುವಂತೆ ಅವರು ಪತ್ರದಲ್ಲಿ ಕೋರಿದ್ದಾರೆ. ಮೇ, ಜೂನ್, ಜುಲೈನಲ್ಲಿ ರಸಗೊಬ್ಬರಕ್ಕೆ ಗರಿಷ್ಠ ಬೇಡಿಕೆಯತ್ತು. ಆದರೆ ಈ ಅವಧಿಯಲ್ಲಿ ಗೊಬ್ಬರ ಪೂರೈಕೆ ಪ್ರಮಾಣ ಕುಸಿದಿತ್ತು ಎಂಬುದನ್ನು ಅವರು ಪತ್ರದ ಮೂಲಕ ಕೇಂದ್ರ ಸಚಿವರ ಗಮನಕ್ಕೆ ತಂದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.