ಶುಕ್ರವಾರ, ಮೇ 20, 2022
25 °C

ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆಗೆ ನೇತಾಜಿ ಪ್ರಶಸ್ತಿ ಪ್ರದಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಇಲ್ಲಿನ ನೇತಾಜಿ ಸಂಶೋಧನಾ ಕೇಂದ್ರವು 2022ರ ನೇತಾಜಿ ಪ್ರಶಸ್ತಿಯನ್ನು ಜಪಾನ್‌ನ ಮಾಜಿ ಪ್ರಧಾನ ಮಂತ್ರಿ ಶಿಂಜೊ ಅಬೆ ಅವರಿಗೆ ಭಾನುವಾರ ಪ್ರದಾನ ಮಾಡಿದೆ.

ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ 125 ನೇ ಜನ್ಮದಿನಾಚರಣೆ ಅಂಗವಾಗಿ ಅವರ ಎಲ್ಜಿನ್ ರಸ್ತೆಯಲ್ಲಿನ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಕೋಲ್ಕತ್ತದ ಜಪಾನ್‌ನ ಕಾನ್ಸುಲ್ ಜನರಲ್ ನಕಮುರಾ ಯುಟಕಾ ಅವರು ಅಬೆ ಅವರ ಪರವಾಗಿ ಗೌರವವನ್ನು ಸ್ವೀಕರಿಸಿದರು.

ಭಾರತಕ್ಕೆ ಜಪಾನ್‌ನ ರಾಯಭಾರಿಯಾಗಿರುವ ಸಂತೋಶಿ ಸುಜುಕಿ ಅವರು ನವದೆಹಲಿಯಿಂದ ವರ್ಚುವಲ್‌ ಮೂಲಕ ಸಮಾರಂಭದಲ್ಲಿ ಭಾಗವಹಿಸಿದ್ದರು. 

ಈ ವೇಳೆ ಸುಭಾಷ್‌ ಚಂದ್ರ ಬೋಸ್‌ ಅವರ ಮೊಮ್ಮಗ ಸುಗತ ಬೋಸ್‌ ಮತ್ತು ನೇತಾಜಿ ಸಂಶೋಧನಾ ಕೇಂದ್ರದ ನಿರ್ದೇಶಕರು ಹಾಜರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು