ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Uttrakhand Exit Poll 2022| ಉತ್ತರಾಖಂಡದಲ್ಲಿ ಬಿಜೆಪಿ - ಕಾಂಗ್ರೆಸ್ ಪೈಪೋಟಿ

Last Updated 7 ಮಾರ್ಚ್ 2022, 14:16 IST
ಅಕ್ಷರ ಗಾತ್ರ

ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಅಂತ್ಯವಾಗಿದ್ದು, ಇದೀಗ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ.

ಉತ್ತರಾಖಂಡದಲ್ಲಿ ಬಿಜೆಪಿ–ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಆದರೂ, ಬಿಜೆಪಿ ಗೆಲ್ಲುವ ಸಾಧ್ಯತೆಗಳು ಒಂದು ಕೈ ಹೆಚ್ಚೇ ಇದೆ ಎಂದು ಸಮೀಕ್ಷೆಗಳು ಹೇಳಿವೆ.

ಸದ್ಯ ಉತ್ತರಾಖಂಡದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ. 50 ಶಾಸಕರ ಬೆಂಬಲದೊಂದಿಗೆ ಬಿಜೆಪಿಯ ಪುಷ್ಕರ್‌ ಸಿಂಗ್‌ ದಾಮಿ ಅವರು ಮುಖ್ಯಮಂತ್ರಿಯಾಗಿದ್ದಾರೆ.

ಆದರೆ, ಬಿಜೆಪಿ ಕಳೆದಬಾರಿಗಿಂತಲೂ ಈ ಬಾರಿ ಕಡಿಮೆ ಸ್ಥಾನಗಳನ್ನು ಗೆಲ್ಲಲಿದೆ ಎಂಬುದು ಎಲ್ಲ ಸಮೀಕ್ಷೆಗಳಲ್ಲೂ ಪ್ರತಿಫಲಿಸಿದೆ.

ಯಾವ ಸಮೀಕ್ಷೆಯಲ್ಲಿ ಯಾರಿಗೆ ಎಷ್ಟು ಸ್ಥಾನ? ಇಲ್ಲಿದೆ ಮಾಹಿತಿ

ಎಬಿಪಿ ನ್ಯೂಸ್‌ – ಸಿವೋಟರ್‌
ಬಿಜೆಪಿ 26–32
ಕಾಂಗ್ರೆಸ್‌ 32–38
ಎಎಪಿ 0–2

ಇಟಿಜಿ ರಿಸರ್ಚ್‌
ಬಿಜೆಪಿ 37–40
ಕಾಂಗ್ರೆಸ್‌ 29–32
ಎಎಪಿ 0–1

ನ್ಯೂಸ್‌ 24
ಬಿಜೆಪಿ 43
ಕಾಂಗ್ರೆಸ್‌ 24
ಎಎಪಿ 0

ನ್ಯೂಸ್‌ಎಕ್ಸ್‌–ಪೋಲ್‌ಸ್ಟರ್‌
ಬಿಜೆಪಿ 31–33
ಕಾಂಗ್ರೆಸ್‌ 33–35
ಎಎಪಿ 0–3

ರಿಪಬ್ಲಿಕ್‌ ಟಿ.ವಿ
ಬಿಜೆಪಿ 35–39
ಕಾಂಗ್ರೆಸ್‌ 28–34
ಎಎಪಿ 0–3

ಟೈಮ್ಸ್‌ ನವ್‌ – ವಿಇಟಿಒ
ಬಿಜೆಪಿ 37
ಕಾಂಗ್ರೆಸ್‌ 31
ಎಎಪಿ 1

ಝೀ ನ್ಯೂಸ್‌– ಡಿಸೈನ್‌ಬಾಕ್ಸ್ಡ್‌
ಬಿಜೆಪಿ 26–30
ಕಾಂಗ್ರೆಸ್‌ 35–40
ಎಎಪಿ 0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT