ಗುರುವಾರ , ಮಾರ್ಚ್ 30, 2023
32 °C

ಉಚ್ಚಾಟಿತ ಸಮಾಜವಾದಿ ಪಕ್ಷದ ಶಾಸಕ ಬಿಜೆಪಿಗೆ ಸೇರ್ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಖನೌ: ಸಮಾಜವಾದಿ ಪಕ್ಷದ ಉಚ್ಚಾಟಿತ ಶಾಸಕ ಸುಭಾಷ್‌ ಪಾಸಿ ಮಂಗಳವಾರ ಇಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. 

‘ಪಕ್ಷದ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್‌ ಸಿಂಗ್ ಅವರ ಸಮ್ಮುಖದಲ್ಲಿ ಎಸ್‌ಪಿ ಶಾಸಕ ಸುಭಾಷ್‌ ಪಾಸಿ, ಅವರ ಪತ್ನಿ ರಿನಾ ಪಾಸಿ ಮಂಗಳವಾರ ಇಲ್ಲಿ ಬಿಜೆಪಿಗೆ ಸೇರ್ಪಡೆಯಾದರು’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದ್‌ ನಾರಾಯಣ ಶುಕ್ಲಾ ಹೇಳಿದರು.

ಪಾಸಿ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಸ್ವತಂತ್ರ ಸಿಂಗ್‌, ಪಾಸಿ ಆಗಮನವು ಬಿಜೆಪಿಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಿದರು.  

ಘಾಜಿಪುರದ ಸಾದಿಪುರ ಕ್ಷೇತ್ರದ ಶಾಸಕ ಪಾಸಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದಲ್ಲಿ ಎಸ್‌ಪಿಯಿಂದ ಉಚ್ಚಾಟಿಸಲಾಗಿತ್ತು. 

ಕಳೆದ ವಾರ ಸೀತಾಪುರದ ಬಿಜೆಪಿ ಶಾಸಕ ರಾಕೇಶ್‌ ರಾಥೋಡ್‌ ಸಮಾಜವಾದಿ ಪಕ್ಷಕ್ಕೆ ಸೇರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು