ಪ್ಯಾರಿಸ್: ದ್ವಿಪಕ್ಷೀಯ ಸಹಕಾರ, ಉಕ್ರೇನ್ ಪರಿಸ್ಥಿತಿ ಮತ್ತು ಇಂಡೋ-ಪೆಸಿಫಿಕ್ ಸಹಕಾರ ಸೇರಿದಂತೆ ಹಲವು ವಿಚಾರಗಳ ಕುರಿತು ಫ್ರಾನ್ಸ್ ವಿದೇಶಾಂಗ ಸಚಿವ ಜೀನ್-ವೆಸ್ ಲೆ ಡ್ರಿಯಾನ್ ಅವರೊಂದಿಗೆಭಾರತದವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮಾತುಕತೆ ನಡೆಸಿದ್ದಾರೆ.

ಈ ಸಂಬಂಧ ಟ್ವಿಟರ್‌ನಲ್ಲಿ ಮಾಹಿತಿ ನೀಡಿರುವ ಜೈಶಂಕರ್, 'ಪ್ಯಾರಿಸ್‌ಗೆ ಆಗಮಿಸಿದ್ದೇನೆ. ವಿದೇಶಾಂಗ ಸಚಿವಜೀನ್-ವೆಸ್ ಲೆ ಡ್ರಿಯಾನ್ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದೇನೆ. ಉಕ್ರೇನ್ ಪರಿಸ್ಥಿತಿ, ಇಂಡೋ–ಫೆಸಿಫಿಕ್ಮತ್ತು ಜಂಟಿ ಸಮಗ್ರ ಕ್ರಿಯಾ ಯೋಜನೆಮೇಲಿನ ಚರ್ಚೆಯು ಪರಸ್ಪರ ನಂಬಿಕೆ ಮತ್ತು ಜಾಗತಿಕ ಪಾಲುದಾರಿಕೆಯನ್ನು ಪ್ರತಿಬಿಂಬಿಸುತ್ತವೆ. ಇಂಡೋ-ಪೆಸಿಫಿಕ್ ಸಹಕಾರಕ್ಕೆ ಸಂಬಂಧಿಸಿದಂತೆ ಯುರೋಪಿಯನ್ ಒಕ್ಕೂಟದ ಮಂತ್ರಿಗಳ ವೇದಿಕೆಯಲ್ಲಿ ಚರ್ಚಿಸಲು ಎದುರುನೋಡುತ್ತಿದ್ದೇವೆ' ಎಂದು ತಿಳಿಸಿದ್ದಾರೆ.

ಜೈಶಂಕರ್ ಅವರು ಭಾನುವಾರದಿಂದ ಮೂರು ದಿನಗಳ ಭೇಟಿ ಸಲುವಾಗಿ ಫ್ರಾನ್ಸ್‌ಗೆ ಆಗಮಿಸಿದ್ದಾರೆ. ಫೆಬ್ರುವರಿ 22ರಂದು ಯುರೋಪಿಯನ್ ಒಕ್ಕೂಟದ ಮಂತ್ರಿಗಳ ವೇದಿಕೆಯಲ್ಲಿ ಭಾಗವಹಿಸಲಿದ್ದಾರೆ.

ಜೈಶಂಕರ್ ಅವರುಜರ್ಮನಿಯಲ್ಲಿ ನಡೆದ ಮ್ಯೂನಿಚ್ ಭದ್ರತಾ ಸಮ್ಮೇಳನ–2022, ಯುರೋಪ್, ಏಷ್ಯಾ ಮತ್ತು ಪ್ರಪಂಚದ ಇತರ ಭಾಗಗಳ ಸಚಿವರುಗಳೊಂದಿಗೆ ಸರಣಿ ಸಭೆಗಳಲ್ಲಿ ಭಾಗವಹಿಸಿದ ಬಳಿಕ ಫ್ರಾನ್ಸ್‌ಗೆ ಆಗಮಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.