ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಲಿಗೆ ಪ್ರಕರಣ: ನ.13ರವರೆಗೆ ಪೊಲೀಸ್‌ ವಶಕ್ಕೆ ಸಚಿನ್‌ ವಾಜೆ

Last Updated 6 ನವೆಂಬರ್ 2021, 11:45 IST
ಅಕ್ಷರ ಗಾತ್ರ

ಮುಂಬೈ: ಸುಲಿಗೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಹಾಯಕ ಪೊಲೀಸ್‌ ಇನ್ಸ್‌ಪೆಕ್ಟರ್‌ ಸಚಿನ್‌ ವಾಜೆ ಅವರನ್ನು ಪೊಲೀಸ್‌ ವಶಕ್ಕೆ ಒಪ್ಪಿಸಿದ್ದ ಅವಧಿಯನ್ನು ಕೋರ್ಟ್‌ ನ. 13ರವರೆಗೂ ವಿಸ್ತರಿಸಿದೆ.

ಉದ್ಯಮಿ ಬಿಮಲ್‌ ಅಗರವಾಲ್‌ ಅವರ ದೂರು ಆಧರಿಸಿ ಗೋರೆಗಾವ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಮುಂಬೈನ ಮಾಜಿ ಪೊಲೀಸ್‌ ಕಮಿಷನರ್ ಪರಂ ವೀರ್‌ ಸಿಂಗ್ ಅವರೂ ಆರೋಪಿಯಾಗಿದ್ದಾರೆ.

ಹೆಚ್ಚುವರಿ ತನಿಖೆಗೆಗಾಗಿ ವಾಜೆ ಅವರನ್ನು ಏಳು ದಿನ ವಶಕ್ಕೆ ಒಪ್ಪಿಸಬೇಕು ಎಂದು ಪೊಲೀಸರು ಕೊರಿದ್ದರು. ಇದಕ್ಕೆ ಕೋರ್ಟ್‌ ಸಮ್ಮತಿಸಿತು. ಉದ್ಯಮಿ ಮುಖೇಶ್‌ ಅಂಬಾನಿ ನಿವಾಸದ ಬಳಿ ಸ್ಫೋಟಕವಿದ್ದ ವಾಹನಪತ್ತೆ ಪ್ರಕರಣ ಕರಿತು ಎನ್‌ಐಎ ಅಧಿಕಾರಿಗಳು ಮಾರ್ಚ್‌ನಲ್ಲಿ ವಾಜೆ ಅವರನ್ನು ಬಂಧಿಸಿದ್ದರು.

ಅಲ್ಲದೆ, ಇವರ ವಿರುದ್ಧ ಪ್ರತ್ಯೇಕ ದೂರು ನೀಡಿದ್ದ ಉದ್ಯಮಿ ಅಗರವಾಲ್‌ ಅವರು ತಮಗೆ ಸೇರಿದ್ದ ಎರಡು ಹೋಟೆಲ್‌ಗಳ ಮೇಲೆ ದಾಳಿ ಮಾಡದಿರಲು ₹9 ಲಕ್ಷ ಲಂಚ ಕೇಳಿದ್ದರು ಎಂದು ಆರೋಪಿಸಿದ್ದರು. ಈ ಪ್ರಕರಣ ಜನವರಿ 2020 ಮತ್ತು ಮಾರ್ಚ್‌ 2021ರ ನಡುವೆ ನಡೆದಿತ್ತು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT