ಮಂಗಳವಾರ, ಜೂನ್ 28, 2022
21 °C

ನಕಲಿ ವಿಮರ್ಶೆ: ಆನ್‌ಲೈನ್‌ ಗ್ರಾಹಕರ ರಕ್ಷಣೆಗೆ ‘ಎಸ್‌ಒಪಿ’

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಆನ್‌ಲೈನ್‌ ಮೂಲಕ ಉತ್ಪನ್ನಗಳು ಮತ್ತು ಸೇವೆಗಳನ್ನು ಖರೀದಿಸುವ ಗ್ರಾಹಕರನ್ನು, ಅವುಗಳ ಕುರಿತ ನಕಲಿ ವಿಮೆರ್ಶೆಯಿಂದ ರಕ್ಷಿಸುವ ಸಲುವಾಗಿ ನಿರ್ದಿಷ್ಟ ಕಾರ್ಯಾಚರಣೆ ಪ್ರಕ್ರಿಯೆಗಳನ್ನು (ಎಸ್‌ಒಪಿ) ತರಲು ಕೇಂದ್ರ ಸರ್ಕಾರ ಶುಕ್ರವಾರ ನಿರ್ಧರಿಸಿದೆ.

ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್‌ ಕುಮಾರ್‌ ಸಿಂಗ್‌ ಅವರು ವರ್ಚುವಲ್‌ ಮೂಲಕ ಶುಕ್ರವಾರ ಸಭೆ ನಡೆಸಿದರು. ಇ–ಕಾಮರ್ಸ್‌ ಕಂಪನಿಗಳ ಪ್ರತಿನಿಧಿಗಳು, ಗ್ರಾಹಕ ಒಕ್ಕೂಟಗಳು, ಕಾನೂನು ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಪ್ರತಿಯೊಬ್ಬರೂ ತಮ್ಮ ಸಲಹೆಗಳನ್ನು ನೀಡುವಂತೆ ಸಚಿವಾಲಯವು ಕೇಳಿದೆ. ಅದರ ಆಧಾರದ ಮೇಲೆ ಎಸ್‌ಒಪಿ ಸಿದ್ಧಪಡಿಸುವುದಾಗಿ ತಿಳಿಸಿದೆ.

ಇ–ಕಾಮರ್ಸ್ ಕಂಪನಿಗಳು ಉತ್ಪನ್ನ ಮತ್ತು ಸೇವೆಗಳ ಕುರಿತಾದ ನಕಾರಾತ್ಮಕ ವಿಮರ್ಶೆಗಳನ್ನು ತೆಗೆದುಹಾಕುವ ಅಥವಾ ವಿಮರ್ಶೆಯ ಪಟ್ಟಿಯಲ್ಲಿ ಕೆಳಕ್ಕೆ ಬರುವಂತೆ ಮಾಡುತ್ತಿವೆ ಎಂದು ಗ್ರಾಹಕ ಒಕ್ಕೂಟಗಳು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು