ರೈತರ ಪ್ರತಿಭಟನೆ: ಸಿಂಘು ಬಾರ್ಡರ್‌ನಲ್ಲೇ ಉಳಿದ 10-15 ಸಾವಿರ ಹೋರಾಟಗಾರರು

ನವದೆಹಲಿ: ನೂತನ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವ ವರೆಗೆ ಪ್ರತಿಭಟನೆಯನ್ನು ಕೈಬಿಡದೆ ಅಚಲವಾಗಿ ಉಳಿಯಲು ರೈತರು ನಿರ್ಧರಿಸಿದ್ದಾರೆ. ಸಿಂಘು ಬಾರ್ಡರ್‌ನಲ್ಲಿ ಬೀಡುಬಿಟ್ಟಿರುವ ರೈತರು ಕೊರೊನಾ ಸಂಕಷ್ಟ, ಲಾಕ್‌ಡೌನ್ ಸವಾಲು, ಮೈಕೊರೆಯುವ ಚಳಿ, ಬಿರು ಬಿಸಿಲು, ಪೊಲೀಸರ ಒತ್ತಡ ಯಾವುದಕ್ಕೂ ಜಗ್ಗದೆ ಹೋರಾಟ ನಡೆಸುತ್ತಿದ್ದಾರೆ.
ಪೊಲೀಸರ ಪ್ರಕಾರ ಸಿಂಘು ಬಾರ್ಡರ್‌ನಲ್ಲಿ 10,000-15,000 ಪ್ರತಿಭಟನಾಕಾರರು ನೆಲೆ ನಿಂತಿದ್ದಾರೆ. ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿರುವ ಟೆಂಟ್‌ಗಳಲ್ಲಿ ಮತ್ತು ಗುಡಿಸಲುಗಳಲ್ಲಿ ಅಳವಡಿಸಿಕೊಂಡಿರುವ ಸಾಧನಗಳನ್ನು ಗಮನಿಸಿದಾಗ ಪ್ರತಿಭಟನೆಯಿಂದ ಹಿಂದಿರುಗುವ ಬಗ್ಗೆ ಯಾವುದೇ ಆಲೋಚನೆಗಳನ್ನು ರೈತರು ನಡೆಸಿಲ್ಲ ಎಂಬುದು ದೃಢವಾಗುತ್ತದೆ.
ಲೋಹ ಮತ್ತು ಬಿದಿರಿನ ಸಹಾಯದಿಂದ ತಾತ್ಕಾಲಿಕ ವಾಸಕ್ಕೆ ವ್ಯವಸ್ಥೆಯನ್ನು ಬಹಳ ಸುಸಜ್ಜಿತವಾಗಿ ಮಾಡಿಕೊಂಡಿರುವ ಪ್ರತಿಭಟನಾಕಾರರು ಅಗತ್ಯ ವಸ್ತುಗಳನ್ನು ಪಂಜಾಬ್‌ನಿಂದ ತರಿಸಿಕೊಂಡಿದ್ದಾರೆ. ಹವಾ ನಿಯಂತ್ರಕ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿದ್ದಾರೆ. ಟ್ರಾಕ್ಟರ್‌ಗಳ ಟ್ರ್ಯಾಲಿಗಳಿಗೂ ಏರ್ ಕೂಲರ್ ಅಥವಾ ಏಸಿಗಳನ್ನು ಹಾಕಿಸಿಕೊಂಡಿದ್ದಾರೆ ಎಂದು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.
ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ಬಿಜೆಪಿ ಎದುರಿಸಲು ಸಾಧ್ಯವಿಲ್ಲ: ಹಿಮಂತ ಬಿಸ್ವಾ
ನೀರು ಶುದ್ಧೀಕರಣ ಯಂತ್ರಗಳು, ವಾಟರ್ ಕೂಲರ್, ರೆಫ್ರಿಜರೇಟರ್ ಮುಂತಾದ ಯಂತ್ರಗಳನ್ನು ಅಳವಡಿಸಿಕೊಂಡಿರುವ ಪ್ರತಿಭಟನಾಕಾರರು ಎಂತಹ ಪರಿಸ್ಥಿತಿಗೂ ಜಗ್ಗದೆ ಪ್ರತಿಭಟನೆ ಮುಂದುವರಿಸುವ ಮುನ್ಸೂಚನೆ ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.