ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂನಲ್ಲಿ 120ಕ್ಕೂ ಹೆಚ್ಚು ಜನರಿದ್ದ ಬಾರ್ಜ್‌ ಮುಳುಗಡೆ: ಅನೇಕ ಮಂದಿ ನಾಪತ್ತೆ

Last Updated 8 ಸೆಪ್ಟೆಂಬರ್ 2021, 14:46 IST
ಅಕ್ಷರ ಗಾತ್ರ

ಗುವಾಹಟಿ: ಪೂರ್ವ ಅಸ್ಸಾಂನ ಜೋರ್‌ಹಾಟ್ ಜಿಲ್ಲೆಯಲ್ಲಿ 120ಕ್ಕೂ ಹೆಚ್ಚು ಜನರಿದ್ದ ಬಾರ್ಜ್‌ ಒಂದು ಬುಧವಾರ ಮಧ್ಯಾಹ್ನ ಬ್ರಹ್ಮಪುತ್ರ ನದಿಯಲ್ಲಿ ಮುಳುಗಡೆಯಾಗಿದೆ. ಬೋಟ್ ಡಿಕ್ಕಿಯಾಗಿರುವುದು ಘಟನೆಗೆ ಕಾರಣವಾಗಿದ್ದು, ಅನೇಕರು ನಾಪತ್ತೆಯಾಗಿದ್ದಾರೆ.

ಮಜುಲಿ ಜಿಲ್ಲೆಯ ಕಮಲಬಾರಿ ಘಾಟ್‌ನಿಂದ ಮಧ್ಯಾಹ್ನ 1.30ಕ್ಕೆ ನೇಮತಿ ಘಾಟ್‌ಗೆ ಹೊರಟಿದ್ದ ಬಾರ್ಜ್‌ನಲ್ಲಿ ಅನೇಕ ವಾಹನಗಳು ಇದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ಜನ ಈಜಿ ನದಿ ತೀರ ತಲುಪಿದ್ದಾರೆ. ಆದರೆ ಅನೇಕರು ಕಣ್ಮರೆಯಾಗಿದ್ದಾರೆ. ಅವರ ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಪರಿಸ್ಥಿತಿ ವಿಚಾರಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿ ಜೋರ್‌ಹಾಟ್ ಮತ್ತು ಮಜುಲಿ ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT