ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆದರಿಕೆ ಇದ್ದರೆ ದೂರು ಕೊಡಿ: ಪೂನಾವಾಲಾಗೆ ಮಹಾರಾಷ್ಟ್ರ ಸೂಚನೆ

Last Updated 3 ಮೇ 2021, 14:51 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ‘ಬೆದರಿಕೆ ಇದ್ದರೆ ಪೊಲೀಸರಿಗೆ ದೂರು ಕೊಡಿ’ ಎಂದು ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ನ ಸಿಇಒ ಆದಾರ್ ಪೂನಾವಾಲಾ ಅವರಿಗೆ ಗೃಹ ಖಾತೆ ರಾಜ್ಯ ಸಚಿವ ಶಂಬುರಾಜೆ ದೇಸಾಯಿ ಹೇಳಿದ್ದಾರೆ.

ಪೂನಾವಾಲಾ ಅವರು ತಮಗೆ ಬೆದರಿಕೆ ಹಾಕಿದವರ ಕರೆಯ ವಿವರವನ್ನು ನೀಡಿದರೆ, ರಾಜ್ಯ ಸರ್ಕಾರ ಈ ಕುರಿತು ಸಮಗ್ರ ತನಿಖೆ ನಡೆಸಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

‘ದಿ ಟೈಮ್ಸ್‌’ ಪತ್ರಿಕೆಗೆ ಪೂನಾವಾಲಾ ಅವರು ನೀಡಿದ್ದ ಸಂದರ್ಶನದಲ್ಲಿ, ಲಸಿಕೆ ಪೂರೈಸುವ ಕುರಿತು ಭಾರತದಲ್ಲಿ ಕೆಲ ಪ್ರಭಾವಿಗಳು ಪದೇ ಪದೇ ಬೆದರಿಕೆಯ ಕರೆಗಳನ್ನು ಮಾಡುತ್ತಿರುವ ಕುರಿತೂ ಹೇಳಿಕೊಂಡಿದ್ದರು.

ಪೂನಾವಾಲಾ ಅವರು ಭಾರತಕ್ಕೆ ಮರಳುವಂತೆ ಮಹಾರಾಷ್ಟ್ರದ ಕಾಂಗ್ರೆಸ್‌ ಮುಖಂಡ ನಾನಾ ಪಟೋಲೆ ಅವರು ಒತ್ತಾಯಿಸಿದ್ದು, ‘ನಿಮ್ಮ ಸುರಕ್ಷತೆಯ ಜವಾಬ್ದಾರಿಯನ್ನು ಕಾಂಗ್ರೆಸ್‌ ವಹಿಸಿಕೊಳ್ಳಲಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT