ಶುಕ್ರವಾರ, ಆಗಸ್ಟ್ 12, 2022
27 °C

ರಿಯಾ ಚಕ್ರವರ್ತಿ ದೂರು; ಸುಶಾಂತ್ ‌ ಸಹೋದರಿಯರು ಮತ್ತು ವೈದ್ಯರ ವಿರುದ್ಧ ಎಫ್‌ಐಆರ್

‍ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ : ನಟ ಸುಶಾಂತ್ ಸಿಂಗ್‌ಗೆ ನಿಷೇಧಿತ ಔಷಧಗಳನ್ನು ನೀಡುವ ಮೂಲಕ ನನ್ನ ವಿರುದ್ಧ ಕ್ರಿಮಿನಲ್ ಪಿತೂರಿ ನಡೆಸಿದ್ದಾರೆಂದು ಆರೋಪಿಸಿ ಆರೋಪಿ ರಿಯಾ ಚಕ್ರವರ್ತಿ ನೀಡಿದ ದೂರಿನ ಅನ್ವಯ ಸುಶಾಂತ್ ಸಿಂಗ್ ಸಹೋದರಿಯರು ಮತ್ತು ಇತರರ ವಿರುದ್ಧ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ನಟ ಸುಶಾಂತ್ ಸಿಂಗ್  ಅವರ ಸಾವಿನ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ರಿಯಾ ಚಕ್ರವರ್ತಿ, ಸುಶಾಂತ್‌ ಸಹೋದರಿಯರಾದ ಪ್ರಿಯಾಂಕಾ ಸಿಂಗ್, ಮೀತು ಸಿಂಗ್‌ ಮತ್ತು  ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ಡಾ.ತರುಣ್ ಕುಮಾರ್ ಅವರ ವಿರುದ್ಧ ದೂರು ಸಲ್ಲಿಸಿದ್ದರು.

‘ಯಾವುದೇ ಸಮಾಲೋಚನೆ ನಡೆಸದೇ, ಡೋಸೇಜ್ ಅನ್ನು ಪರಿಶೀಲಿಸದೇ ಸುಶಾಂತ್‌ಗೆ ಔಷಧ ನೀಡಿದ್ದಾರೆ‘ ಎಂದು ಆರೋಪಿಸಿ ಸುಶಾಂತ್ ಸಿಂಗ್ ಸಹೋದರಿ ಪ್ರಿಯಾಂಕ ಸಿಂಗ್ ಮತ್ತು ಮೀತು ಸಿಂಗ್‌ ಮತ್ತು ದೆಹಲಿ ಮೂಲದ ವೈದ್ಯ ಡಾ. ತರುಣ್‌ ಕುಮಾರ್ ಮತ್ತಿರರ ವಿರುದ್ಧ ರಿಯಾ ಚಕ್ರವರ್ತಿ ದೂರಿನಲ್ಲಿ ಉಲ್ಲೇಖಿಸಿದ್ದರು. ಈ ದೂರಿನ ಅನ್ವಯ ಇವರೆಲ್ಲರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

‘ಇವರೆಲ್ಲರೂ ನನ್ನ ವಿರುದ್ಧ ಸಂಚು ರೂಪಿಸುವುದಕ್ಕಾಗಿಯೇ ಸರ್ಕಾರಿ ಆಸ್ಪತ್ರೆಯ ಲೆಟರ್‌ಹೆಡ್‌ನಲ್ಲಿ ನಿಷೇಧಿತ ಔಷಧಗಳನ್ನು ಬರೆದುಕೊಟ್ಟು, ಅದೇ ಔಷಧಗಳನ್ನು ಸುಶಾಂತ್ ಸೇವಿಸುವಂತೆ ಮಾಡಿದ್ದಾರೆ‘ ಎಂದು ರಿಯಾ ದೂರಿನಲ್ಲಿ ಉಲ್ಲೇಖಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು