ಶನಿವಾರ, ಜನವರಿ 28, 2023
18 °C

ಮೀನುಗಾರರ ಅಪಹರಣ: ಪಾಕ್‌ ನೌಕಾಪಡೆ ಸಿಬ್ಬಂದಿ ವಿರುದ್ಧ ಎಫ್‌ಐಆರ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪೋರ್‌ಬಂದರ್‌: ಗುಜರಾತ್‌ ತೀರದ ಬಳಿಯ ಅರಬ್ಬೀ ಸಮುದ್ರದಲ್ಲಿ ಏಳು ಮಂದಿ ಭಾರತೀಯ ಮೀನುಗಾರರನ್ನು ಅಪಹರಿಸಿ, ಹತ್ಯೆಗೆ ಯತ್ನಿಸಿದ ಆರೋಪದಲ್ಲಿ ಪಾಕಿಸ್ತಾನದ ನೌಕಾಪಡೆಯ 20ರಿಂದ 25 ಮಂದಿ ಸಿಬ್ಬಂದಿಯ ವಿರುದ್ಧ ಇಲ್ಲಿನ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. 

ಅಕ್ಟೋಬರ್‌ 6ರಂದು ‘ಹರಸಿದ್ಧಿ’ ಹೆಸರಿನ ಮೀನುಗಾರಿಕಾ ದೋಣಿಯಲ್ಲಿದ್ದ ಏಳು ಮಂದಿ ಜಖೌ ತೀರದ ಸಮೀಪ ಭಾರತದ ಜಲಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ, ‘ಪಿಎಂಎಸ್‌ಎ ಬರ್ಕತ್‌ 1060‘ ಬೋಟ್‌ನಲ್ಲಿ ಬಂದ ಪಾಕಿಸ್ತಾನದ ನೌಕಾಪಡೆಯ ಸಿಬ್ಬಂದಿ ಅವರತ್ತ ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಗುಂಡಿನ ದಾಳಿಯ ಪರಿಣಾಮ ದೋಣಿ ಮುಳುಗಡೆಯಾಗಿದ್ದು, ಅದರಲ್ಲಿದ್ದ ಮೀನುಗಾರರನ್ನು ಪಾಕಿಸ್ತಾನದ ನೌಕಾಪಡೆಯ ಸಿಬ್ಬಂದಿ ಅಪಹರಿಸಿ ತಮ್ಮ ಹಡಗಿಗೆ ಕರೆದೊಯ್ದಿದ್ದಾರೆ. ಅಲ್ಲಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದೂ ದೂರಲಾಗಿದೆ.

ಮೀನುಗಾರರ ವಿಡಿಯೊ ಚಿತ್ರೀಕರಿಸಿದ ಬಳಿಕ ನೌಕಾಪಡೆಯ ಸಿಬ್ಬಂದಿ ಅವರನ್ನು ಬಿಡುಗಡೆಗೊಳಿಸಿದ್ದಾರೆ. ಭಾರತೀಯ ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ ಮಿನುಗಾರರನ್ನು ರಕ್ಷಿಸಿ ಜಖೌ ಬಂದರಿಗೆ ಕರೆದುಕೊಂಡು ಬಂದಿದ್ದಾರೆ ಎಂದು ಪೋರ್‌ಬಂದರ್‌ನ ಪೊಲೀಸ್‌ ವರಿಷ್ಠಾಧಿಕಾರಿ ರವಿ ಮೋಹನ್‌ ಸೈನಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು